Tuesday, June 23, 2026
spot_imgspot_img
spot_imgspot_img

ಸುರತ್ಕಲ್‌: ನಡೆದುಕೊಂಡು ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ; ಔಷಧ ಏಜೆಂಟ್ ಸಾವು

- Advertisement -
- Advertisement -

ಸುರತ್ಕಲ್‌: ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಲಾರಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಔಷಧ ಮಾರಾಟ ಏಂಜಟ್‌ ಆಗಿದ್ದ ಅಂಬರೀಷ್‌ (61) ಮೃತಪಟ್ಟವರು. ಅಂಬರೀಷ್ ಅವರು ಪಣಂಬೂರಿನ ದೇವಸ್ಥಾನವೊಂದರ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅದೇ ರಸ್ತೆಯಾಗಿ ಬಂದ ಲಾರಿ ಅವರಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ಔಷಧ ಮಾರಾಟಗಾರರಾಗಿದ್ದ ಅಂಬರೀಷ್ ಅವರು, ಜನರಿಗೆ ಔರ್ಷ, ಚಿಕಿತ್ಸೆಗಳ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲದೆ ಕೋವಿಡ್-19 ಪ್ರಕರಣ ಹೆಚ್ಚಿದ್ದ ಸಂದರ್ಭದಲ್ಲಿ ಅಶಕ್ತರಿಗೆ, ಅವಶ್ಯವುಳ್ಳವರಿಗೆ ಮನೆಗೇ ಔಷಧಗಳನ್ನು ತಲುಪಿಸುತ್ತಿದ್ದರು. ಹೊಸಬೆಟ್ಟು ಪಾಂಡುರಂಗ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು.

- Advertisement -

Related news

error: Content is protected !!