Sunday, September 13, 2026
spot_imgspot_img
spot_imgspot_img

ಸುಳ್ಯ: ಕಾರು-ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

- Advertisement -
- Advertisement -

ಸುಳ್ಯ: ಇಲ್ಲಿನ ಮಂಡೆಕೋಲು ಸಮೀಪದ ಮುರೂರು ಎಂಬಲ್ಲಿ ಇನೋವಾ ಕಾರು ಹಾಗೂ ಬೈಕ್ ಅಪಘಾತಗೊಂಡು ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದೆ. ದೇಲಂಪಾಡಿ ಮೈಯಾಳ ನಿವಾಸಿ ಕೃಷ್ಣಜಿ(75) ಮೃತಪಟ್ಟವರು.

ಕೃಷ್ಣಜಿಯವರು ಹಾಗೂ ಅವರ ಪುತ್ರ ಪದ್ಮನಾಭ ಎಂಬವರು ಬೈಕ್ ನಲ್ಲಿ ಸುಳ್ಯ ಹಳೆಗೇಟಿನಲ್ಲಿರುವ ಕೃಷ್ಣಜಿಯವರ ಸಹೋದರಿಯ ಮನೆಗೆ ಬಂದಿದ್ದರು. ಮಧ್ಯಾಹ್ನ ಸುಳ್ಯದಿಂದ ದೇಲಂಪಾಡಿಯ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!