Sunday, June 21, 2026
spot_imgspot_img
spot_imgspot_img

ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಬಂಧನ

- Advertisement -
- Advertisement -

ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಬಂಧನವಾಗಿದ್ದು ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನನ್ನು ಬಂಧಿಸಲಾಗಿದೆ. ಮಠ ಸಿನಿಮಾದಿಂದಲೇ ಗುರು ಪ್ರಸಾದ್ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದರು.

ಶ್ರೀನಿವಾಸ್ ಅನ್ನೋ ವ್ಯಕ್ತಿಗೆ ಹಣ ಕೊಡೋ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗಿರಿ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್​ಗೆ ಹಾಜರಾಗದ ಹಿನ್ನಲೆ ಎನ್​ಬಿಡಬ್ಲೂ ಜಾರಿಯಾಗಿತ್ತು.

ಎನ್ ಬಿಡಬ್ಲೂ ಜಾರಿ ಹಿನ್ನಲೆ ಸದ್ಯ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ವಂಚನೆ ಹಾಗು ಮೋಸ ಮಾಡಿರೋ ಆರೋಪ ಹಿನ್ನಲೆ ಕೇಸ್ ದಾಖಲಾಗಿತ್ತು‌. ಸದ್ಯ ವಿಚಾರಣೆ ನಿರ್ದೇಶಕರನ್ನು ಮಾಡುತ್ತಿದ್ದು ಬಳಿಕ ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ.

- Advertisement -

Related news

error: Content is protected !!