
ಭಾರತದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕೆಲ ದಿನಗಳಿಂದ ಹಿಂದೂ ಮತ್ತು ಸಿಖ್ಖರನ್ನ ಟಾರ್ಗೆಟ್ ಮಾಡಿ ಹತ್ಯಾಕಾಂಡ ನಡೆಸಲಾಗ್ತಿದೆ.. ಈ ರಕ್ತ ಚರಿತ್ರೆಗೆ ಕಾರಣ ಉಗ್ರರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.. ಆದ್ರೆ ಮುಗ್ಧರ ರಕ್ತ ಹರಿಸುತ್ತಿರುವವರು ಮಾಮೂಲಿ ಉಗ್ರರಲ್ಲ ಬದಲಾಗಿ ಹೈಬ್ರೀಡ್ ಉಗ್ರರು ಅನ್ನೋ ಕಳವಳಕಾರಿ ಮಾಹಿತಿ ಬಹಿರಂಗಗೊಂಡಿದೆ.. ಇದ್ಯಾರು ಹೈಬ್ರೀಡ್ ಉಗ್ರರು ಅಂತೀರಾ..?

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಾಗರೀಕರನ್ನ ಗುರಿಯಾಗಿಸಿ ಹತ್ಯಾಕಾಂಡಗಳನ್ನ ನಡೆಸಲಾಗ್ತಿದೆ. ಕಾಶ್ಮೀರಿ ಪಂಡಿತರು ಈ ದಾಳಿಯ ಮೇನ್ ಟಾರ್ಗೆಟ್. ಈ ದಾಳಿ ನಡೆಸಿದವರು ಅಧಿಕೃತ ಸಂಘಟನೆಯ ಉಗ್ರರಲ್ಲ.. ಅವರು ಒಂಥರಾ ಸುಫಾರಿ ತೆಗೆದುಕೊಂದು ಹತ್ಯೆ ಮಾಡುವ ಹೈಬ್ರೀಡ್ ಉಗ್ರರು ಅನ್ನೋ ಕಳವಳಕಾರಿ ಸಂಗತಿಯನ್ನ ಇಂಟಲಿಜೆನ್ಸ್ ಬಹಿರಂಗಪಡಿಸಿದೆ.

ಇತ್ತೀಚೆಗೆ ನಡೆದ ನಾಗರೀಕರ ಹತ್ಯೆಗಳು ಗುರುತಿಸಲ್ಪಟ್ಟ ಉಗ್ರರ ಕೃತ್ಯವಲ್ಲ. ಸ್ಥಳೀಯ ಯುವಕರನ್ನು ಬಳಸಿಕೊಂಡು ವಿಭಿನ್ನವಾಗಿ ಈ ದಾಳಿಗಳನ್ನ ನಡೆಸಲಾಗಿದೆ.. ಈ ದಾಳಿಕೋರರು ಜನರ ಮಧ್ಯೆಯಿದ್ದು ಟಾರ್ಗೆಟಿಂಗ್ ಆಟ್ಯಾಕ್ ಮಾಡ್ತಾರೆ.. ಟಾರ್ಗೆಟ್ ಫಿಕ್ಸ್ ಆದ ಮೇಲೆ ಕೆಲ ಕಾಲ ಅವರನ್ನು ಟ್ರ್ಯಾಕ್ ಮಾಡಲಾಗುತ್ತದೆ.. ಈ ಹತ್ಯೆಕೋರರ ಬಳಿ ಸದಾ ಕಾಲ ಯಾವುದೇ ಡೇಂಜರಸ್ ವೆಪನ್ಸ್ ಇರುವುದಿಲ್ಲ.. ದಾಳಿ ಮಾಡುವ ಸಮಯದಲ್ಲಿ ಮಾತ್ರ ಇವರಿಗೆ ವೆಪನ್ಸ್ ನೀಡಲಾಗುತ್ತದೆ.. ಟಾರ್ಗೆಟ್ ಸಕ್ಸಸ್ ಆಗ್ತಿದ್ದಂತೆ ಆರ್ಡರ್ನಂತೆ ದಾಳಿಕೋರರಿಂದ ಶಸ್ತ್ರಾಸ್ತ್ರಗಳು ವಾಪಸ್ ಪಡೆಯಲಾಗುತ್ತೆ.. ಪಾಕಿಸ್ತಾನದ ಹ್ಯಾಂಡ್ಲರ್ಗಳ ಆರ್ಡರ್ನಂತೆ ಇವರು ಕೆಲಸ ಮಾಡ್ತಾರೆ.. ಇಂಥಾ ದಾಳಿಕೋರರನ್ನ ಗುಪ್ತಚರ ಇಲಾಖೆ ಹೈಬ್ರೀಡ್ ಉಗ್ರರು ಎಂದು ಕರೆದಿದ್ದಾರೆ.
ಕೆಲ ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಈ ರೀತಿಯ ಹತ್ಯಾಕಾಂಡಕ್ಕೆ ಒಂದು ಗತಿ ಕಾಣಿಸಲು ಎನ್ಐಎ ಅಖಾಡಕ್ಕೆ ಧುಮುಕಿದೆ.. ಇಷ್ಟು ದಿನ ಸೈಲೆಂಟ್ ಆಗಿದ್ದ ಉಗ್ರರು ಶಾಂತಿಯ ನೆಲದಲ್ಲಿ ಅಶಾಂತಿಯ ಕಿಡಿ ಹಚ್ಚಲು ರೆಡಿಯಾಗಿದ್ದಾರೆ.. ಆದ್ರೆ ರಾಷ್ಟ್ರೀಯ ತನಿಖಾ ದಳ ಮಾತ್ರ ಅಶಾಂತಿಯ ಕಿಡಿ ಧಗಧಗಿಸುವ ಮೊದಲೇ ಆರಿಸಲು ಮುಂದಾಗಿದ್ದಾರೆ.

ಇಂದು ಬೆಳ್ಳಂ ಬೆಳಗ್ಗೆ ಕಾಶ್ಮೀರದ 16 ಕಡೆ ಏಕಕಾಲದಲ್ಲಿ ಎನ್ಐಎ ದಾಳಿ ನಡೆಸಿದೆ.. ಶ್ರೀನಗರ, ಅನಂತ್ನಾಗ್, ಕುಲ್ಗಾಮ್, ಬಾರಾಮುಲ್ಲಾ ಸೇರಿ 9 ಕಡೆ ರೇಡ್ ಮಾಡಿದೆ.. ಶ್ರೀನಗರದಲ್ಲಿ ಕಳೆದ 2-3 ದಿನಗಳಲ್ಲಿ 70 ಶಂಕಿತ ಉಗ್ರರನ್ನು ಎನ್ಐಎ ಬಂಧಿಸಿದ್ದು, ಇದುವರೆಗೂ ಕಾಶ್ಮೀರದ್ಯಾಂತ 570 ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.. ಇನ್ನೂ ISIS ಸಂಘಟನೆಯಿಂದ ವಾಯ್ಸ್ ಆಫ್ ಹಿಂದ್ ಪತ್ರಿಕೆ ಪ್ರಕಟ ಮಾಡುತ್ತಿರುವ ಅಘಾತಕಾರಿ ಸಂಗತಿ ಬಯಲಾಗಿದೆ.. ಈ ಪತ್ರಿಕೆ ಭಾರತ ಕೇಂದ್ರಿತ ಆನ್ಲೈನ್ ನಿಯತಕಾಲಿಕೆಯಾಗಿದ್ದು, ಪತ್ರಿಕೆಯಲ್ಲಿ ಉಗ್ರ ಕೃತ್ಯಕ್ಕೆ ಪ್ರಚೋದಿಸುವ ಲೇಖನಗಳು ಮುದ್ರಣವಾಗ್ತಿದ್ದು, ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯಲು ವಾಯ್ಸ್ ಆಫ್ ಹಿಂದ್ ಪ್ರಯತ್ನ ನಡೆಸಿರುವ ಮಾಹಿತಿ ಹೊರ ಬಿದ್ದಿದೆ.
ಒಟ್ಟಿನಲ್ಲಿ ಕಣಿವೆಯಲ್ಲಿ ಪಾಕ್ ರೂಪಿಸಿರುವ ಹೊಸ ತಂತ್ರಕ್ಕೆ ಈಗ ಎನ್ಐಎ ಪ್ರತಿತಂತ್ರ ರೂಪಿಸಲು ಸಿದ್ಧವಾಗಿದ್ದು, ಇಂದು 16 ಕಡೆ ದಾಳಿ ಮಾಡುವ ಮೂಲಕ ಉಗ್ರರ ಆಟ ಆರಂಭವಾಗುವ ಮೊದಲೇ ಅಂತ್ಯ ಕಾಣಿಸಲು ಎನ್ಐಎ ಸಜ್ಜಾಗಿದೆ.











