Tuesday, September 1, 2026
spot_imgspot_img
spot_imgspot_img

ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದ ಬಾಲಕನ ಜೀವ ಉಳಿಸಿ ತಾನು ಬಲಿಯಾದ ಬಾಲಕಿ

- Advertisement -
- Advertisement -

ಯಾದಗಿರಿ: 16 ವರ್ಷದ ಬಾಲಕಿಯೋರ್ವಳು ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಬಾಲಕನ ಜೀವ ಉಳಿಸಿ ತಾನು ಬಲಿಯಾದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿಯಲ್ಲಿ ನಡೆದಿದೆ.

ಕುರಿಗಾಹಿ ಬಾಲಕನೋರ್ವ ನೀರಿನ‌ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರು ಬಿದ್ದಿದ್ದ. ಇದನ್ನು ಗಮನಿಸಿದ ರಾಜಮ್ಮ ಕುರಿಗಾಹಿಯ ಜೀವ ಉಳಿಸಿದ್ದಾಳೆ. ಬಾಲಕನನ್ನು ರಕ್ಷಿಸುವ ಸಂದರ್ಭದಲ್ಲಿ ಬಾಲಕಿ ರಾಜಮ್ಮ ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದಾಳೆ.

ಕುರಿಗಾಹಿಯ ಜೀವ ಉಳಿಸಿ ತನ್ನ ಪ್ರಾಣ ಕಳೆದುಕೊಂಡ ಬಾಲಕಿಯ ಕುರಿತು ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ. ಗ್ರಾಮಸ್ಥರು ಬಾಲಕಿಯ ಶವವನ್ನು ಹೊರ ತೆಗೆದಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!