- Advertisement -
- Advertisement -
ನವದೆಹಲಿ: ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶಮುಖ್ ಮೇಲಿನ ನೂರು ಕೋಟಿ ಲಂಚ ಆರೋಪ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮುಂಬೈ ಮಾಜಿ ಕಮಿಷನರ್ ಪರಂ ಬೀರ್ ಸಿಂಗ್ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಈ ಬಗ್ಗೆ ಇಂದು ಬೆಳಗ್ಗೆ 11ಕ್ಕೆ ವಿಚಾರಣೆ ನಡೆಯಲಿದೆ.

ಗೃಹ ಸಚಿವ ಅನಿಲ್ ದೇಶ್ಮುಖ್ ಎನ್ಐಎಯಿಂದ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವ ಸಚಿನ್ ವಾಜೆಯವರಿಗೆ ತಿಂಗಳಿಗೆ 100 ಕೋಟಿ ರೂ. ಹಣ ಸಂಗ್ರಹಿಸುವಂತೆ ಹೇಳಿದ್ದರು ಎಂದು ಸಿಎಂಗೆ ಪತ್ರ ಬರೆದು ಪರಂಬೀರ್ ಸಿಂಗ್ ಆರೋಪಿಸಿದ್ದಾರೆ.

ಅಲ್ಲದೇ ಪರಮ್ ಬೀರ್ ಸಿಂಗ್ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯೂ ವಿಚಾರಣೆಗೆ ಬರಲಿದೆ. ಇನ್ನು ಈ ಪ್ರಕರಣ ಮಹಾರಾಷ್ಟ್ರ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ 6 ಜಿ.ಬಿಗೂ ಹೆಚ್ಚಿನ ಡೇಟಾ ಒದಗಿಸಿದ್ದಾರೆ.


- Advertisement -








