- Advertisement -
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು,ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬನಶಂಕರಿಯಲ್ಲಿ ನದೆದಿದೆ. ಮೃತ ಬಾಲಕ ಗಗನ್(10) ಎನ್ನಲಾಗಿದೆ.

ಬನಶಂಕರಿಯಲ್ಲಿರುವ ಶೋಭಾ ವ್ಯಾಲಿ ಅಪಾರ್ಟ್ಮೆಂಟ್ನ ಬಾಲ್ಕನಿಯಲ್ಲಿ 10 ವರ್ಷದ ಗಗನ್ ಆಟವಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಟೆರೇಸ್ ಮೇಲೆ ಆಟ ಆಡಲು ಬಾಲಕ ತೆರಳಿದ್ದ ಈ ವೇಳೆ ಹನ್ನೊಂದನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆ ಕುರಿತು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -








