Wednesday, September 16, 2026
spot_imgspot_img
spot_imgspot_img

ಎಸ್‌ವೈ‌ಎಸ್ ಮಾಣಿ ಸೆಂಟರ್ ನಿಂದ 75 ನೇ ಸ್ವಾತಂತ್ರೋತ್ಸವ ಆಚರಣೆ

- Advertisement -
- Advertisement -

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಮಾಣಿ ಸೆಂಟರ್ ಹಾಗೂ ಎಸ್ಸೆಸ್ಸೆಫ್ ಮತ್ತು ಎಸ್‌ವೈ‌ಎಸ್ ಸೂರಿಕುಮೇರು ಇದರ ಜಂಟಿ ಆಶ್ರಯದಲ್ಲಿ 75 ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಇಲ್ಲಿನ ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು ಧ್ವಜಾರೋಹಣಗೈದರು,ಇಬ್ರಾಹಿಂ ಸಅದಿ ಮಾಣಿ ಮುಖ್ಯ ಭಾಷಣ ಮಾಡಿದರು, ಹೈದರ್ ಸಖಾಫಿ ಗಡಿಯಾರ ದುಆ ನೆರವೇರಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಪೇರಮೊಗರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸೆಂಟರ್ ಕೋಶಾಧಿಕಾರಿ ದಾವೂದ್ ಕಲ್ಲಡ್ಕ,ಬ್ರಾಂಚ್ ಇಸಾಬಾ ಸೆಕ್ರೆಟರಿ ಹನೀಫ್ ಸಂಕ,ಸೂರಿಕುಮೇರು,ಅಬ್ದುಲ್ ಲತೀಫ್ ಸಅದಿ ಶೇರಾ,ಅಶ್ರಫ್ ಸಖಾಫಿ ಸೂರಿಕುಮೇರು, ಬ್ರಾಂಚ್ ಅಧ್ಯಕ್ಷ ಅಬ್ದುಲ್ ಕರೀಂ ನೆಲ್ಲಿ,ಹಂಝ ಸೂರಿಕುಮೇರು, ಹಸೈನ್ ಟೈಲರ್ ಸೂರಿಕುಮೇರು, ಉಮ್ಮರ್ ಫಾರೂಕ್ ಸೂರಿಕುಮೇರು, ಫಝಲ್ ಮಾಣಿ,ಮುಹೈಮಿನ್ ಸೂರಿಕುಮೇರು,ಮುನೀರ್ ಮಾಣಿ,ಆಶಿಕ್ ಸೂರಿಕುಮೇರು. ಮುಂತಾದವರು ಉಪಸ್ಥಿತರಿದ್ದರು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

- Advertisement -

Related news

error: Content is protected !!