Wednesday, September 23, 2026
spot_imgspot_img
spot_imgspot_img

ಕಡಬ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಪೇರಳೆ ಮರದಿಂದ ಜಾರಿ ಬಿದ್ದು ಬಾಲಕ ಮೃತ್ಯು

- Advertisement -
- Advertisement -

ಕಡಬ: ಆಟವಾಡುತ್ತಿದ್ದ ವೇಳೆ ಪೇರಳೆ ಮರದಿಂದ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಮರಕ್ಕಡದಲ್ಲಿ ನಡೆದಿದೆ.

ಮರಕ್ಕಡ ನಿವಾಸಿ ದಿವಾಕರ ಎಂ ರವರ ಮಗ ಉಲ್ಲಾಸ್ (9) ಮೃತ ಬಾಲಕ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಳ್ಪಾಡಿಯಲ್ಲಿ 3 ನೇ ತರಗತಿಯಲ್ಲಿ ವಿದ್ಯಾಬ್ಯಾಸವನ್ನು ಮಾಡುತ್ತಿದ್ದ ಉಲ್ಲಾಸ್ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ಆಡವಾಡುತ್ತಿದ್ದನು.

ನಿನ್ನೆ ಮನೆಯ ಹತ್ತಿರದ ವಠಾರದಲ್ಲಿದ್ದ ಪೇರಳ ಮರಕ್ಕೆ ಹತ್ತಿ ಆಟವಾಡುತ್ತಿರುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ವಿಷಯ ತಿಳಿದ ತಂದೆ ದಿವಾಕರ ರವರು ತಕ್ಷಣವೇ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅದಾಗಲೇ ಬಾಲಕ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!