Thursday, February 2, 2023
spot_imgspot_img
spot_imgspot_img

ಧಾರಾವಾಹಿಯಿಂದ ಹೊರ ನಡೆದ ಮೋಕ್ಷಿತಾ ಪೈ..! ಅಭಿಮಾನಿಗಳಲ್ಲಿ ಬೇಸರ

- Advertisement -G L Acharya G L Acharya
- Advertisement -

ನಟಿ ಮೋಕ್ಷಿತಾ ಪೈ ಪಾರು ಧಾರಾವಾಹಿ ಮೂಲಕ ಕರುನಾಡಿನ ಮನೆ ಮಗಳಾಗಿದ್ದಾಳೆ. ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಮೋಕ್ಷಿತಾ ಇತ್ತೀಚೆಗಷ್ಟೇ ತಮಿಳು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬೇಸರದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಪಾರು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೋಕ್ಷಿತಾ ಪೈ ಅವರಿಗೆ ಈಗ ಸಿನಿಮಾ ಹಾಗೂ ಇತರೆ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಆದರೆ, ಕಥೆ, ಪಾತ್ರಗಳ ಬಗ್ಗೆ ಮೋಕ್ಷಿತಾ ಪೈ ಅವರು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಶಾಕಿಂಗ್ ಸುದ್ದಿ ಕೊಟ್ಟ ಮೋಕ್ಷಿತಾ

ಕನ್ನಡದಲ್ಲಿ ಮೂಡಿ ಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಾಗಲೇ ಸೂಪರ್ ಡೂಪರ್ ಆಗಿ ಹಿಟ್ ಆಗಿದೆ. ಈ ಧಾರಾವಾಹಿ ತೆಲುಗು, ತಮಿಳು, ಮಲಯಾಳಂ ಹಾಗೂ ಬಂಗಾಲಿಯಲ್ಲಿ ರಿಮೇಕ್ ಆಗಿದೆ. ತೆಲುಗಿನಲ್ಲಿ ರಾಧಮ್ಮ ಕೂತುರು, ತಮಿಳಿನಲ್ಲಿ ಮೀನಾಕ್ಷಿ ಪೊಣ್ಣುಂಗ ಎಂದು ಈ ಧಾರಾವಾಹಿ ಕಳೆದ ಎರಡು ತಿಂಗಳ ಹಿಂದೆ ಪ್ರಸಾರ ಆರಂಭಿಸಿತ್ತು. ಮೋಕ್ಷಿತಾ ಪೈ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ತಮಿಳಿನ ಝೀ ವಾಹಿನಿಯಲ್ಲಿ ಮೂಡಿ ಬರುತ್ತಿದೆ. ಇದರಲ್ಲಿ ಶಕ್ತಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು.

ಪಾರು ಧಾರಾವಾಹಿಯಲ್ಲಿ ಸಾಫ್ಟ್ ಆಗಿ ಕಾಣಿಸಿಕೊಂಡಿದ್ದ ಮೋಕ್ಷಿತಾ ಪೈ ಅವರು, ತಮಿಳಿನಲ್ಲಿ ರಗಡ್ ಲುಕ್ ನಲ್ಲಿ ಮಿಂಚಿದ್ದರು. ಮೀನಾಕ್ಷಿ ಪೊಣ್ಣುಂಗ ಧಾರಾವಾಹಿಯಲ್ಲಿ ಎರಡನೇ ಮಗಳ ಪಾತ್ರದಲ್ಲಿ ನಟಿಸಿ, ಬಜಾರಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಈ ಮೂಲಕ ತಮಿಳಿಗರ ಪ್ರೀತಿಯ ಮಗಳಾಗಿದ್ದರು. ಆದರೆ, ಮೋಕ್ಷಿತಾ ಅವರಿಗೆ ಕನ್ನಡ ಧಾರಾವಾಹಿ, ಸಿನಿಮಾ ಹಾಗೂ ತಮಿಳು ಧಾರಾವಾಹಿ ಮೂರಕ್ಕೂ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ಮೀನಾಕ್ಷಿ ಪೊಣ್ಣುಂಗ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಸ್ವತಃ ಅವರ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

- Advertisement -

Related news

error: Content is protected !!