Monday, October 12, 2026
spot_imgspot_img
spot_imgspot_img

ಪುತ್ತೂರು: ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಹೆಲ್ತ್ ಕಿಟ್ ವಿತರಣೆ

- Advertisement -
- Advertisement -

ಪುತ್ತೂರು: ಬಿಜೆಪಿ ಯುವ ಮೋರ್ಚಾದಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹೆಲ್ತ್ ಕಿಟ್ ಕೊಡುವ ಕಾರ್ಯಕ್ರಮ ಜೂ. 15ರಂದು ದರ್ಬೆ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.

ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್‍ಯಕಾರಿಣಿ ಸದಸ್ಯ ಅಕ್ಷಯ್ ರೈ ದಂಬೆಕಾನ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಹೆಲ್ತ್ ಕಿಟ್‌ಗಳಾದ ಸ್ಯಾನಿಟೈಸರ್, ಮಾಸ್ಕ್, ಪೇಸ್‌ಶೀಲ್ಡ್ ಮತ್ತು ಕೈಕವಚನ್ನು ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ವಿ ಪಿ ಕಾರ್ಯಪ್ಪ ಮತ್ತು ವಲಯ ಅರಣ್ಯಧಿಕಾರಿ ಸುಬ್ಬಯ್ಯ ನಾಯ್ಕ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೇವಾ ಭಾರತಿಯ ಪ್ರಮುಖ್ ರವೀಂದ್ರ ಪಿ, ಸಂತೋಷ್ ಬೋನಂತಾಯ, ಉದ್ಯಮಿ ಸಂತೋಷ್ ರೈ ಕೈಕಾರ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ತಾ.ಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಂತೋಷ್ ಪೆರಿಯಡ್ಕ, ಜಯಂತ ಪೂಜಾರಿ, ಬಿಜೆಪಿ ನಗರ ಯುವಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಡಾ. ಹರ್ಷಕುಮಾರ್ ರೈ ಮಾಡಾವು ಮತ್ತು ನವೀನ್ ರೈ ಕೈಕಾರ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಯವರಿಗೆ ಸಮಾನ ಗೌರವ ನೀಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹೆಲ್ತ್ ಕಿಟ್ ಕೊಡುವ ಯೋಜನೆ ಕೆಲವು ದಿನಗಳಿಂದ ಯುವ ಮೋರ್ಚಾದ ವತಿಯಿಂದ ನಡೆಯುತ್ತಿದ್ದು, ಇವತ್ತು ಶಾಸಕರ ಮೂಲಕ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಕೂಡಾ ಕೆಲಸ ಕಾರ್ಯ ನಡೆಸುತ್ತಿದ್ದು ಅವರಿಗೂ ಸಮಾನ ಗೌರವ ಸಿಗಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಕ್ಷಯ್ ರೈ ದಂಬೆ ಕಾನ ಹೇಳಿದರು.

- Advertisement -

Related news

error: Content is protected !!