Friday, August 7, 2026
spot_imgspot_img
spot_imgspot_img

ಪ್ರೀತಿಸಿ ಮದುವೆಯಾದ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ!

- Advertisement -
- Advertisement -

ಕಲಬುರಗಿ: ನಗರದ ರಾಜಾಪುರ ಬಡಾವಣೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಶವವು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ಯುವತಿ ರಮಾಬಾಯಿ (23) ಎನ್ನಲಾಗಿದೆ.

ರಮಾಬಾಯಿ ರಾಹುಲ್ ಎಂಬುವ ಯುವಕನನ್ನು ಪ್ರೀತಿಸಿದ್ದಳು. ರಾಹುಲ್ ರಮಾಬಾಯಿಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ. ಆದರೆ ಗಂಡನ ಮನೆಯಲ್ಲಿ ನಿತ್ಯ ಕಿರುಕುಳಕ್ಕೆ ಒಳಗಾಗಿದ್ದಳು. ರಮಾಬಾಯಿಗೆ ಜಾತಿ ನಿಂದನೆ ಮಾಡಿ ಅತ್ತೆ-ಮಾವ ಮತ್ತು ಗಂಡ ಕಿರುಕುಳ ನೀಡುತ್ತಿದ್ದರು. ನಿನ್ನೆ ಸಂಜೆ ಗಂಡನ ಮನೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.

- Advertisement -

Related news

error: Content is protected !!