Sunday, October 1, 2023
spot_imgspot_img
spot_imgspot_img

ಬುರ್ಖಾ ಧರಿಸಿ ಮೆಡಿಕಲ್ ಶಾಪ್ ಗೆ ಬಂದು ಹಲವು ವಸ್ತುಗಳನ್ನು ಎಗರಿಸಿ ಪರಾರಿಯಾದ ಖತರ್ನಾಕ್ ಕಳ್ಳಿಯರು

- Advertisement -G L Acharya panikkar
- Advertisement -

ಕಾರವಾರ: ಬುರ್ಖಾ ಧರಿಸಿ ಮೆಡಿಕಲ್ ಶಾಪ್ ಗೆ ಬಂದು ಹಲವು ವಸ್ತುಗಳನ್ನು ಎಗರಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಭಟ್ಕಳ ಪಟ್ಟಣದ ಕಟ್ಟಿಗೆ ಡಿಪೋ ಸಮೀಪದ ಅಪೋಲೋ ಮೆಡಿಕಲ್‌ನಲ್ಲಿರುವ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆ ವೇಳೆಗೆ ಔಷಧ ಖರೀದಿ ನೆಪದಲ್ಲಿ ಮೆಡಿಕಲ್‌ಗೆ ಆಗಮಿಸಿದ್ದ ಮಹಿಳೆಯರು ಮೆಡಿಕಲ್ ಸಿಬ್ಬಂದಿ ಕಣ್ಣಪ್ಪಿಸಿ ಶಾಪ್‌ನಿಂದ ಕೆಲ ವಸ್ತುಗಳನ್ನು ಕದ್ದು ಬುರ್ಖಾದಲ್ಲಿರಿಸಿಕೊಂಡಿದ್ದಾರೆ.

ಮಹಿಳೆಯರು ಕಳ್ಳತನ ಮಾಡಿರುವ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಪರಿಶೀಲನೆ ಮಾಡಿದಾಗ ಮಹಿಳೆಯರು ಸಿಕ್ಕಿಕೊಂಡಿದ್ದಾರೆ.

- Advertisement -

Related news

error: Content is protected !!