Monday, August 3, 2026
spot_imgspot_img
spot_imgspot_img

ವಿಟ್ಲ: ಶ್ರೀ ಮಾರಿಯಮ್ಮ ಯುವಕ ಸಂಘ(ರಿ.) ದೇವಿನಗರ ಸೆರ್ಕಳ ಇದರ 27ನೇ ವಾರ್ಷಿಕೋತ್ಸವ ಹಾಗೂ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ

- Advertisement -
- Advertisement -
vtv vitla
vtv vitla

ವಿಟ್ಲ: ಕಳೆದ 26 ವರ್ಷಗಳಿಂದ ಸಮಾಜಮುಖಿ ಸೇವೆಗಳ ಮೂಲಕ ಪ್ರಸಿದ್ಧಿ ಹೊಂದಿದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಶ್ರೀ ಮಾರಿಯಮ್ಮ ಯುವಕ ಸಂಘ(ರಿ). ದೇವಿನಗರ ಸೆರ್ಕಳ ವತಿಯಿಂದ 27ನೇ ವಾರ್ಷಿಕೋತ್ಸವವು ಡಿ.3ರಂದು ನಡೆಯಿತು.

vtv vitla
vtv vitla

ವಾರ್ಷಿಕೋತ್ಸವದ ಪ್ರಯುಕ್ತ ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೇವರಿಗೆ ಅಲಂಕಾರ ಪೂಜೆ ಮತ್ತು ಮೇಳದ ದೇವರ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಸಂಜೆ ಮಾದಕಟ್ಟೆ ದೇವಸ್ಥಾನದಿಂದ ಶ್ರೀ ಮೇಳದ ದೇವರ ಭವ್ಯ ಮೆರವಣಿಗೆ ನಡೆದು, ಬಳಿಕ ದೇವಿನಗರ ಸೆರ್ಕಳದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ಚೌಕಿ ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಿತು.

vtv vitla
vtv vitla
vtv vitla
- Advertisement -

Related news

error: Content is protected !!