- Advertisement -
- Advertisement -

ಹೆದ್ದಾರಿ ಬದಿಯಲ್ಲಿ ಅಕ್ರಮ ಕಟ್ಟಡ ತಲೆಯಿತ್ತಿದ್ದರೂ ಕೂಗಳತೆ ದೂರದಲ್ಲಿರುವ ವಿಟ್ಲ ಪಡ್ನೂರು ಪಂ.ಉಪಾಧ್ಯಕ್ಷರು ಜಾಣಕುರುಡು ಪ್ರದರ್ಶಿಸಿದ್ದಾರೆಂಬ ನೇರ ಆರೋಪ ಗಾಣದಮೂಲೆ ನಿವಾಸಿಗಳದ್ದಾಗಿತ್ತು. ಈ ಬಗ್ಗೆ ಪಂ.ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಮಾತನಾಡುತ್ತಾ, ರಾತ್ರಿ ಹೊತ್ತಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದು ಮರುದಿನ ನನ್ನ ಗಮನಕ್ಕೆ ಬಂದಿರುತ್ತದೆ. ತಕ್ಷಣವೇ ಸಂಬಂಧಿಸಿದ ವ್ಯಕ್ತಿಗಳಲ್ಲಿ ಅಕ್ರಮ ಕಟ್ಟಡ ತೆರವು ಮಾಡಬೇಕೆಂದು ಹೇಳಿದ್ದೇನೆ.
ಅಲ್ಲದೇ ಪಂ.ಪಿಡಿಒಗೆ ಕರೆ ಮಾಡಿ ಕಾನೂನು ರೀತಿಯ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದ್ದೇನೆ. ನಮ್ಮ ಪಂ.ವ್ಯಾಪ್ತಿಯಲ್ಲಿ ಯಾರೇ ಅಗಲಿ ಕಾನೂನು ಉಲ್ಲಂಘಿಸಿ ಅಕ್ರಮ ಎಸಗಿದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲು ನಾನು ಒತ್ತಾಯಿಸುತ್ತೇನೆ. ಅಕ್ರಮಗಳಿಗೆ ನನ್ನ ಸಂಪೂರ್ಣ ವಿರೋಧವಿದ್ದು ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಕೀಳುಮಟ್ಟದ ರಾಜಕೀಯಕ್ಕೆ ಎಡೆಕೊಡುವುದಿಲ್ಲವೆಂದು ನಾಗೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.





- Advertisement -








