Tuesday, August 11, 2026
spot_imgspot_img
spot_imgspot_img

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷೆ; ಸಂತ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೆ.100 ಫಲಿತಾಂಶ

- Advertisement -
- Advertisement -

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ 2021-22 ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಸಂತ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೆ.100 ಫಲಿತಾಂಶ ದೊರೆತಿದೆ.

ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಸಂತ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಗೈಡ್ಸ್ ವಿದ್ಯಾರ್ಥಿಳಾದ ಮಾನ್ವಿ, ತೃಷಾ, ಲುವನ, ವಿಯೋನ, ಶ್ರೇಯ, ನಫ್ಲ, ಶೃತಿ, ಕುಷಿ, ವಿಲ್ಮಾ, ಹಾಗೂ ಸ್ಕೌಟ್ಸ್ ವಿದ್ಯಾರ್ಥಿಳಾದ ಭುವನ್, ಲನ್ವಿನ್, ವಿಶ್ವಾಸ್, ಅಜಯ್ ಭಾಗವಹಿಸಿ, ಉತ್ತೀರ್ಣರಾಗಿದ್ದು, ಸಂಸ್ಥೆಗೆ ಶೆ.100 ಫಲಿತಾಂಶ ದೊರಕಿಸಿ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಕೌಟ್ ವಿಭಾಗದಲ್ಲಿ ಒಟ್ಟು 110 ವಿದ್ಯಾರ್ಥಿಗಳು ಮತ್ತು ಗೈಡ್ ವಿಭಾಗದಲ್ಲಿ ಒಟ್ಟು 164 ವಿದ್ಯಾರ್ಥಿಗಳು ಭಾಗವಹಿಸಿದ್ದು. ಭಾಗವಹಿಸಿದ 274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

- Advertisement -

Related news

error: Content is protected !!