Saturday, April 27, 2024
spot_imgspot_img
spot_imgspot_img

ಎರಡು ಹೊಸ ಮಾದರಿಯ ಕಣಜದ ಹುಳುಗಳ ಪತ್ತೆ!

- Advertisement -G L Acharya panikkar
- Advertisement -

ಅಸ್ಸಾಂ: ಭಾರತದ ಪ್ರಾಣಿಶಾಸ್ತ್ರ ಸರ್ವೆಯು ಅಸ್ಸಾಂನಲ್ಲಿ ಎರಡು ಹೊಸ ಮಾದರಿಯ ಕಣಜದ ಹುಳುಗಳನ್ನು ದೃಢೀಕರಿಸಿದೆ.

ಒಟ್ಟು ಒಂಬತ್ತು ಬಗೆಯ ಹುಳುಗಳನ್ನು ದೃಢೀಕರಣಕ್ಕೆ ಕಳುಹಿಸಲಾಗಿತ್ತು. ಅವುಗಳಲ್ಲಿ ,ಒಂದು ಪಾಟರ್ಸ್ ಕಣಜ ಹುಳು , ಇನ್ನೊಂದು ಹಾರ್ನೆಟ್ ಕಣಜ ಹುಳು ಎಂದು ಗುರುತಿಸಲಾಗಿದೆ.

ಅಸ್ಸಾಂನ ಬಹೋನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿಕ್ರಮಾದಿತ್ಯ ಬಕಲಿಯಾಲ್ ಎಂಬವರಿಗೆ ಈ ಬಗೆಯ ಹುಳುಗಳು ದೊರೆತಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಭಾರತ ಪ್ರಾಣಿ ಶಾಸ್ತ್ರ ಸಮೀಕ್ಷೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಈ ಪ್ರಬೇಧಗಳು ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ ಕಾಣಸಿಕ್ಕಿದೆ ಎನ್ನಲಾಗಿದ್ದು ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರ ಕಾಣಬಹುದು ಎಂದು ಅವರು ಹೇಳಿದ್ದಾರೆ. ಬಕಿಲಿಯಾರ್ ರವರು ಕಳೆದ ಎರಡು ವರ್ಷಗಳಿಂದ ಕೀಟಗಳ ಬಗೆಗಿನ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!