Wednesday, April 24, 2024
spot_imgspot_img
spot_imgspot_img

ಕಾರ್ಕಳ: ಹಲ್ಲುಜ್ಜುವ ಪೇಸ್ಟ್​​ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವೃದ್ಧೆ ಸಾವು!

- Advertisement -G L Acharya panikkar
- Advertisement -
driving

ಕಾರ್ಕಳ: ಇಲ್ಲಿನ ಕಾಬೆಟ್ಟು ಎಂಬಲ್ಲಿ ಹಲ್ಲುಜ್ಜುವ ಪೇಸ್ಟ್​ ಎಂದು ತಪ್ಪಾಗಿ ತಿಳಿದು ವೃದ್ಧೆಯೊಬ್ಬರು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತ ವೃದ್ಧೆ ಕಾರ್ಕಳ ಕಾಬೆಟ್ಟಿನ ಕಲಾವತಿ (61) ಎಂಬುವವರು ಇಲಿ ಪಾಷಾಣವನ್ನು ಹಲ್ಲುಜ್ಜುವ ಪೇಸ್ಟ್​ ಎಂದು ತಪ್ಪಾಗಿ ಗ್ರಹಿಸಿ ಹಲ್ಲು ಉಜ್ಜಿಬಿಟ್ಟಿದ್ದರು. ಇದಾದ ಕೆಲವೇ ಕ್ಷಣದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು, ಕುಟುಂಬಸ್ಥರು ವಿಚಾರಿಸಿದಾಗ ಅದು ಹಲ್ಲುಜ್ಜುವ ಪೇಸ್ಟ್​ ಅಲ್ಲ, ಇಲಿ ಪಾಷಾಣ ಎಂಬುದು ಗೊತ್ತಾಗಿದೆ.

ಕೂಡಲೇ ವೃದ್ಧೆಯನ್ನು ಕಲಾವತಿಯನ್ನು ಕಾರ್ಕಳದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದರು. ಈ ಘಟನೆ ಬಗ್ಗೆ ಕಾರ್ಕಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!