- Advertisement -
- Advertisement -

ಕಾಸರಗೋಡು: ಬಸ್ಸು ಪ್ರಯಾಣಿಕನ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕಾಞಂಗಾಡ್ ನ ಪ್ರಬೀಷ್ (31) ಮತ್ತು ಸಜಿತ್ (32) ಬಂಧಿತರು.

ಕಾಸರಗೋಡು ಬ್ಯಾಂಕೊಂದರ ಕಾವಲುಗಾರ ವಿಜಯನ್ ರವರ ಹಣವನ್ನು ಕಳವುಗೈದ ಪ್ರಕರಣದ ಆರೋಪಿಗಳಾಗಿದ್ದಾರೆ.
ಎರಡು ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ತಲಪಾಡಿ ಬಳಿ ಐದು ಸಾವಿರ ರೂ. ನಗದನ್ನು ಎಗರಿಸಿದ್ದರು. ವಿಜಯನ್ ಬೊಬ್ಬೆ ಹಾಕಿದಾಗ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಭಿಷ್ ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆದರೆ ಪರಾರಿಯಾಗಿದ್ದ ಸಜಿತ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತರ ವಿರುದ್ಧ ಹಲವಾರು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


- Advertisement -








