Sunday, April 28, 2024
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ: ನಮ್ಮಲ್ಲಿ ಒಗ್ಗಟ್ಟಿನ ಅವಶ್ಯಕತೆ ಬಹಳಷ್ಟಿದೆ. ಜಾತಿಯ ಬಂಧನ ತೊರೆದು ಎಲ್ಲರೂ ಒಟ್ಟಾಗಿ ಸಾಗೋಣ. ನಮ್ಮಲ್ಲಿರುವ ಧ್ವೇಷ ಭಾವವನ್ನು ತೊರೆದು ಪ್ರೀತಿ ಭಾವದಲಿ ಮುಂದುವರಿಯೋಣ. ತಾಯಂದಿರಿಂದ ಮಕ್ಕಳಿಗೆ ಸಂಸ್ಕಾರ‌ ಸಂಸ್ಕೃತಿ ಕಲಿಸುವ ಕೆಲಸವಾಗಲಿ. ಎಲ್ಲರೂ ನಮ್ಮವರೆನ್ನುವ ಭಾವ ನಮ್ಮಲ್ಲಿ ಬರಲಿ. ಎಲ್ಲರನ್ನು‌ಒಟ್ಟಾಗಿ ಸೇರಿಸಿಕೊಂಡು ಹೋಗುವ ಅನಿವಾರ್ಯತೆ ಇದೆ. ಯುವಕರನ್ನು ಪರಿವರ್ತಿಸುವ ಕೆಲಸವಾಗಬೇಕು. ನಮ್ಮಲ್ಲಿರುವ ಉಪಕಾರ ಸ್ಮರಣೆ ನಮ್ಮನ್ನು ಕಾಪಾಡುತ್ತದೆ. ಗ್ರಾಮ ದೇವಾಲಯದ ಅಭಿವೃದ್ದಿ ಅದು ಗ್ರಾಮದ ಪ್ರತಿಯೋರ್ವನ ಕರ್ತವ್ಯ. ಸಾಧು ಸಂತರ ಪಾದಸ್ಪರ್ಷತೆಯಿಂದ ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಅ.೩೦ರಂದು ನಡೆದ ಕಲಶ ಸೇವಾ ರಶೀದಿ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು

ನಮ್ಮ ಮಕ್ಕಳು ಡ್ರಗ್ಸ್ ಮಾಫೀಯ, ಮತಾಂತರದಂತಹ ಜಾಲಕ್ಕೆ ಭಲಿಯಾಗುತ್ತಿದ್ದಾರೆ. ಇಂತಹ ಒಂದು ವಾತಾವರಣ ನಮ್ಮ ಸುತ್ತ ನಮಗರಿವಿಲ್ಲದಂತೆಯೇ ನಿರ್ಮಾಣವಾಗುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಸಂಘಟನೆಗಳನ್ನು ಭಲಪಡಿಸುವ ಅವಶ್ಯಕತೆ ಬಹಳಷ್ಟಿದೆ. ನಮ್ಮ ದೈವ ದೇವರುಗಳ ಬಗ್ಗೆ, ಸಂಘಟನೆಗಳ ಬಗ್ಗೆ ನಿಂಧನೆ ಮಾಡುವ ಬದಲು ಅದರ ಪಾವಿತ್ರತೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ನಾವೆಲ್ಲರೂ ನಿರಂತರವಾಗಿ ಒಗ್ಗಟ್ಟಿನಿಂದ ಇರಬೇಕಾಗಿದೆ. ಹಿರಿಯರನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ಹಿಂದೂ ಸಮಾಜಕ್ಕೆ ಕೃತಗ್ನತೆಯ ಕೊರತೆಯಿದೆ. ಈ  ದೇಶದ ಭವಿಷ್ಯದ ಬಗ್ಗೆ ಪ್ರತಿಯೋರ್ವರೂ ಚಿಂತಿಸಬೇಕಾಗಿದೆ. ಪ್ರತಿಯೋರ್ವ ಹಿಂದೂ ವೂ  ನಮ್ಮ ಶ್ರದ್ದಾಕೇಂದ್ರದ ಬಗ್ಗೆ ಜಾಗೃತರಾಗುವ ಅವಶ್ಯಕತೆಯಿದೆ ಎಂದರು.

ಕ್ಷೇತ್ರದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರು, ಪುತ್ತೂರು ಶಾಸಕರಾದ ಶಾಸಕರಾದ ಸಂಜೀವ ಮಠಂದೂರುರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸುಖವನ್ನು ಬಯಸತಕ್ಕಂತದ್ದೇ ಬ್ರಹ್ಮಕಲಶೋತ್ಸವ. ಇದು ಕೇವಲ ಷಣ್ಮುಖ ಸುಬ್ರಹ್ಮಣ್ಯನಿಗೆ ಬ್ರಹ್ಮಕಲಶವಲ್ಲ ಇಡೀ ಊರಿಗೆ ಬ್ರಹ್ಮಕಲಶವಾದಂತೆ. ನಮ್ಮಲ್ಲಿರುವ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಇಂತಹ ಬ್ರಹ್ಮಕಲಶಗಳ ಪಾತ್ರವೂ ಬಹಳಷ್ಟಿದೆ. ಕಳೆದ ಇತಿಹಾಸಗಳನ್ನು ಮೆಲುಕುಹಾಕುವ ಜೊತೆಯಲ್ಲಿ ನಮ್ಮಲ್ಲಿರುವ ಶ್ರದ್ಧಾಭಕ್ತಿಯನ್ನು ಭಗವಂತನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸಂಧರ್ಬದಲ್ಲಿ ತೋರ್ಪಟಿಸುವ ಕೆಲಸವಾಗಬೇಕು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಭಗವಂತನ ಸೇವೆ ಮಾಡಲು ಜೀವನದಲ್ಲಿ ನಮಗೆ ಸಿಕ್ಕಿದ ಅವಕಾಶವಾಗಿದೆ. ಅದನ್ನು ಸದುಪಯೋಗ ಪಡಿಸುವ ಮನಸ್ಸು ನಮ್ಮದಾಗಬೇಕು.

ಇನ್ನುಳಿದಿರುವ ೫೦ದಿನವನ್ನು ತನ್ನ, ಮನ, ಧನದಿಂದ ಹೇಗೆ ಸಮರ್ಪಿತಗೊಳಿಸ ಬಹುದೆಂಬುದನ್ನು ನಾವು ಯೋಚಿಸಬೇಕಾಗಿದೆ. ಸಮಿತಿಯವರ ಯೋಜನೆಗಳಿಗೆ ನಮ್ಮ ಯೋಚನೆಗಲಕನ್ನು ಸೇರಿಸಿಕೊಂಡು ಉತ್ತಮ ಕಾರ್ಯಕ್ರಮವನ್ನು ಮಾಡೋಣ. ಸಾರ್ವಜನಿಕರಿಗೆ ಸಂದೇಶ ಕೊಡುವ ಕಾರ್ಯ ಕ್ರಮ ಇದಾಗಬೇಕಾಗಿದೆ. ಇಡ್ಕಿದು ಎನ್ನುವುದು ಆರ್.ಎಸ್.ಎಸ್.ನ ತಾಯಿಬೇರು. ಆ ಪ್ರದೇಶದಲ್ಲಿಯೇ ಸಮಾಜಘಾತುಕ ಶಕ್ತಿಗಳು ಬೆಳೆಯುತ್ತಿರುವುದು  ಆಘಾತಕಾರಿ ವಿಷಯವಾಗಿದೆ. ಸವಾಲುಗಳು ಕಾಲಬುಡದಲ್ಲಿವೆ. ಅದನ್ನು ಮೆಟ್ಟಿ ನಿಲ್ಲಲು ಹಿಂದೂ ಸಮಜ ಒಟ್ಟಾಗಬೇಕು. ಹಿಂದೂ ಸಮಾಜ ಒಟ್ಟಾಗಲು ಭಗವಂತನ ಸಾನಿಧ್ಯದಿಂದ ಮಾತ್ರ ಸಾಧ್ಯ. ಹಿಂದೂ ಸಮಾಜಕ್ಕೆ ಸಂದೇಶವನ್ನು ಕೊಡುವ ಕೆಲಸ ಧಾರ್ಮಿಕ ಸಭೆಗಳ ಮೂಲಕ ಆಗ್ತಿದೆ. ದೇವಾಲಯಗಳಲ್ಲಿ ಧಾರ್ಮಿಕ ಶಿಕ್ಷಣ ಕೊಡುವ ಕೆಲಸವಾಗುತ್ತಿದೆ. ದೇವಾಲಯ ಹಿಂದುಗಳ ಪರಿವರ್ತನಾ ಕೇಂದ್ರವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಒಂದೇ ಮನಸ್ಸಿನಿಂದ ಕೆಲಸ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ದೇವಸ್ಥಾನದ ಅನ್ನಛತ್ರ ನಿರ್ಮಾಣಕ್ಕೆ ಇದೀಗಾಗಲೇ ೨೫ ಲಕ್ಷ ರೂಪಾಯಿಯ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದೇನೆ. ದೇವಾಲಯಕ್ಕೆ ಶೌಚಾಲಯ ಹಾಗೂ ಸ್ನಾನಗ್ರಹದ ನಿರ್ಮಾಣಕ್ಕಾಗಿ ೧೦ ಲಕ್ಷ ರೂಪಾಯಿಯನ್ನು ಒದಗಿಸಿದ್ದೇನೆ.

ದೇವಾಲಯಕ್ಕೆ ಬರುವ ರಸ್ತೆಗೆ ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣ ಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಧಾನ ಒದಗಿಸುತ್ತೇನೆ. ದೇವಸ್ಥಾನದ ಸುತ್ತ ಇಂಟರ್ ಲಾಕ್ ಅಳವಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ಗ್ರಾಮದ ಎಲ್ಲಾ ಒಳರಸ್ತೆಯನ್ನು ಅಭಿವೃದ್ಧಿ ಪಡಿಸುವ ಕೆಲಸವಾಗಲಿದೆ. ಟೆಕ್ನಿಕಲ್ ಸಮಸ್ಯೆಗಳಿದ್ದರೆ ಕೆಲಸದಲ್ಲಿ ಅಲ್ಪ ತೊಡಕಾಗುತ್ತಿದೆ. ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಎಲ್ಲರ ತನು, ಮನ, ಧನದ ಸಹಕಾರದಿಂದ ಕಾರ್ಯಕ್ರಮ ಇನ್ನಷ್ಟು ಯಶಸ್ಸಾಗಲಿ ಎಂದರು.

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ ನಮ್ಮ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಬೇಕು. ಅದಕ್ಕೆ ಗ್ರಾಮಸ್ಥರೆಲ್ಲರ ಸಂಪೂರ್ಣ ಸಹಕಾರ ಬೇಕಾಗಿದೆ. ಹಿಂದಿನ ಭಾರಿಯಂತೆಯೇ ಈ ಭಾರಿಯೂ ನೀವೆಲ್ಲರು ಕೈಜೋಡಿಸಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಜೊತೆಜೊತೆಯಾಗಿ ಸಾಗೋಣ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಮೀತಿಯಿಂದ ಮನೆಭೇಟಿ ನಡೆಯಲಿದೆ ಎಲ್ಲರೂ ಸಹಕಾರ ನೀಡಿ ದೇವರ ಕೃಪೆಗೆ ಪಾತ್ರರಾಗಬೇಕಾಗಿದೆ. ಒಟ್ಟಾರೆ ಇದೊಂದು ಮಾದರಿ ಬ್ರಹ್ಮಕಲಶವಾಗಿಸೋಣ ಎಂದರು.

ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡರವರು ಮಾತನಾಡಿ ಇನ್ನುಳಿದಿರುವುದು ೫೦ದಿನಗಳು ಮಾತ್ರ ಇದೀಗಾಗಲೇ ಕೆಲಸಕಾರ್ಯಗಳೆಲ್ಲ ಭರದಿಂದ ಸಾಗುತ್ತಿದೆ. ಒಮ್ಮೆ ನಿಶ್ಚಯ ಮಾಡಿದ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸಬೇಕೆನ್ನುವ ದೃಷ್ಟಿಯಿಂದ ಶತಪ್ರಯತ್ನದಿಂದ ಈ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕೆಲಸಕಾರ್ಯಗಳನ್ನು ಮಾಡೋಣ. ಕ್ಷೇತ್ರ ಬ್ರಹ್ಮಕಲಶೋತ್ಸವದ ಸಂದರ್ಭ ನಮ್ಮ ಕ್ಷೇತ್ರದ ಎಲ್ಲಾ ಅಭಿವೃದ್ದಿ ಕಾರ್ಯಗಳು ಪೂರ್ತಿಯಾಗಬೇಕು ಎಮ್ಮುವುದು ನಮ್ಮ ಮಹದಾಸೆ. ಗ್ರಾಮದ ಹಿರಿಯರಲ್ಲಾ ಈ ಕ್ಷೇತ್ರಕ್ಕೆ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ದಿಯೊಂದಿಗೆ ಕ್ಷೇತ್ರದ ಬ್ರಹ್ಮಕಲಶ ವಿಜ್ರಂಭಣೆಯಿಂದ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಪುಲ್ಲ ಚಂದ್ರ ಪಿ.ಜಿ. ಕೋಲ್ಪೆರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿಹಿಂದಿನ ಬ್ರಹ್ಮ ಕಲಶದ ಸಂದರ್ಭದಲ್ಲಿಯೂ ಮಾಣಿಲ ಶ್ರೀಗಳು ಆಮಂತ್ರಣ ಪತ್ರ ಬಿಡುಗಡೆ ಮಾಡಿದ್ದಾರೆ. ಈ ಭಾರಿಯೂ ಅವರೇ ಆಗಮಿಸಿರುವುದು ಸಂತಸ ತಂದಿದೆ ಎಂದರು. ವಿವಿಧ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಊರ ಪರವೂರ ಭಕ್ತಾಧಿಗಳ ಸಹಕಾರವೂ ನಿರಂತರವಾಗಿ ಕ್ಷೇತ್ರಕ್ಕೆ ಸಿಗುತ್ತಿದೆ. ನಾವೆಲ್ಲರೂ ಇಟ್ಟಾಗಿ ಯಶಸ್ವಿ ಬ್ರಹ್ಮಕಲಶವಾಗಿ ಇದನ್ನು ಮಾಡಬೇಕಾಗಿದೆ ಎಂದರು.

ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೀರ್ತನಾಕಿಶೋರ್ ಭಟ್ ಬೈಪದವು ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಎಂ.ಹೆಚ್.ರಮೇಶ್ ಭಟ್ ವಂಧಿಸಿದರು. ನವೀನ್ ಮುಂಡ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!