Tuesday, May 7, 2024
spot_imgspot_img
spot_imgspot_img

ಚಡ್ಡಿ ತೆಗೆಯಲು ನೀರಿಗೆ ಹಾರಿದ ಕಾರ್ಮಿಕ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್‌ ವೈರಲ್‌

- Advertisement -G L Acharya panikkar
- Advertisement -

ಉಡುಪಿ: ಮೀನುಗಾರಿಕೆ ದೋಣಿಯ ಕಾರ್ಮಿಕರೊಬ್ಬರು ನೀರಿಗೆ ಬಿದ್ದ ಚಡ್ಡಿಯನ್ನು ತೆಗೆಯಲು ನೀರಿಗೆ ಹಾರಿದ್ದು, ಬಳಿಕ ಮೇಲಕ್ಕೆ ಬರಲಾಗದೇ ಒದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕರಾವಳಿಯ ಮೀನುಗಾರಿಕಾ ಬಂದರೊಂದರಲ್ಲಿ ನಡೆದ ಪ್ರಸಂಗ ಇದು.

ನೀರಿಗೆ ಇಳಿದ ಯುವಕನನ್ನು ಬೋಟಿನಲ್ಲಿದ್ದ ಯುವಕರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಮೇಲ್ಭಾಗದಲ್ಲಿದ್ದವರು ಎಂತಾ ಕರ್ಮ ಮಾರಾಯ…ಚಡ್ಡಿ ತೆಗೆಯಲು ಯಾರಾದರು ನೀರಿಗೆ ಹಾರುತ್ತಾರ…ನಿಂಗೆ ಮಂಡೆ ಸಮ ಉಂಟಾ ಮಾರಾಯ..ನೀವೊಂದು ಎಂತಾ ಜನ. ಅದು ನೂರು ರೂಪಾಯಿಗೆ ಸಿಗುತ್ತದೆ….ಎಂದು ಹೇಳುವುದು ಕೂಡಾ ವಿಡಿಯೋದಲ್ಲಿ ಕೇಳುತ್ತಿದೆ.

ಮೀನುಗಾರಿಕೆ ದೋಣಿಯ ಕಾರ್ಮಿಕರೊಬ್ಬರ ಅಂಡರ್ ವೇರ್ ನೀರಿಗೆ ಬಿದ್ದಿದ್ದು, ಅದನ್ನು ತೆಗೆಯಲು ನೀರಿಗೆ ಹಾರಿದ್ದಾರೆ. ಆದರೆ ಮೇಲಕ್ಕೆ ಬರಲಾಗದೇ ಒದ್ದಾಡುತ್ತಿದ್ದಾಗ ಬೋಟಿನಲ್ಲಿದ್ದವರು ಹಗ್ಗವನ್ನು ಇಳಿಬಿಟ್ಟು ಅವರನ್ನು ಮೇಲಕ್ಕೆ ಎಳೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೋಡುವರರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

- Advertisement -

Related news

error: Content is protected !!