Wednesday, May 8, 2024
spot_imgspot_img
spot_imgspot_img

ಟಿಪ್ಪು ಸುಲ್ತಾನ್ ವಿಜಯ ವರ್ಣಚಿತ್ರ ಬರೋಬ್ಬರಿ 6.28 ಕೋಟಿ ಬೆಲೆಗೆ ಮಾರಾಟ..! ಚಿತ್ರದ ವಿಶೇಷತೆ ಏನು ಗೊತ್ತಾ..?

- Advertisement -G L Acharya panikkar
- Advertisement -

ಟಿಪ್ಪು ಸುಲ್ತಾನ್ ವಿಜಯವನ್ನು ಬಿಂಬಿಸುವ ಚಿತ್ರವೊಂದು ಬರೋಬ್ಬರಿ 6.28 ಕೋಟಿ ಬೆಲೆಗೆ ಮಾರಾಟವಾಗಿದೆ. ಲಂಡನ್‌ ನ ಸೋಥೆಬಿ ಹರಾಜು ಕೇಂದ್ರದಲ್ಲಿ ನಡೆದ ಆರ್ಟ್ಸ್ ಆಫ್ ದಿ ಇಸ್ಲಾಮಿಕ್ ವರ್ಲ್ಡ್ ಅಂಡ್ ಇಂಡಿಯಾ ಎಂಬ ಹರಾಜಿನಲ್ಲಿ ಟಿಪ್ಪು ಸುಲ್ತಾನ್ ಕಾಲದ ವರ್ಣಚಿತ್ರವನ್ನು ಮಾರಾಟಕ್ಕೆ ಇಡಲಾಗಿತ್ತು.

1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಸಾಧಿಸಿದ ಐತಿಹಾಸಿಕ ವಿಜಯವನ್ನು ಪ್ರತಿಬಿಂಬಿಸುವ ವರ್ಣ ಚಿತ್ರ 630,000 ಪೌಂಡ್ ಗಳಿಗೆ (ರೂ. 6.28 ಕೋಟಿ) ಮಾರಾಟವಾಗಿದೆ. ಈ ವರ್ಣಚಿತ್ರ ಎರಡನೇ ಆಂಗ್ಲೋ- ಮೈಸೂರು ಯುದ್ಧದ ಭಾಗವಾಗಿ ಸೆಪ್ಟೆಂಬರ್ 10, 1780 ರಂದು ನಡೆದ ‘ಪೊಲ್ಲಿಲೂರ್ ಕದನದ ದಿಗ್ವಿಜಯದ ಸಂಕೇತವಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಇಸ್ಲಾಮಿಕ್ ವರ್ಲ್ಡ್ ಹಾಗೂ ಭಾರತೀಯರ ಕೇಂದ್ರಬಿಂದುವಾಗಿತ್ತು.

ಪೊಲ್ಲಿಲೂರ್ ಕದನದ ವಿಜಯದ ಸ್ಮರಣಾರ್ಥ ಟಿಪ್ಪು ಸುಲ್ತಾನ್ 1784ರಲ್ಲಿ ಸೆರಿಂಗಪಟ್ಟಣಂನಲ್ಲಿ ಹೊಸದಾಗಿ ನಿರ್ಮಿಸಲಾದ ದರಿಯಾ ದೌಲತ್ ಬಾಗ್ ನಲ್ಲಿ ಪೊಲ್ಲಿಲೂರ್ ಕದನದ ವರ್ಣಚಿತ್ರ ಮಾಡಿಸಿದ್ರು. ಹರಾಜು ಆದ ಚಿತ್ರಕಲೆ ಸುಮಾರು 32 ಅಡಿ ಉದ್ದ ಹಾಗೂ 10 ಅಡಿ ಎತ್ತರವಿದೆ.

- Advertisement -

Related news

error: Content is protected !!