Wednesday, September 2, 2026
spot_imgspot_img
spot_imgspot_img

ತುಪ್ಪ ಮಾರಾಟ ಮಾಡುವ ನೆಪದಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಗ್ಯಾಂಗ್ ಅಂದರ್!

- Advertisement -
- Advertisement -

ಬೆಂಗಳೂರು: ತುಪ್ಪ ಮಾರಾಟದ ನೆಪದಲ್ಲಿ ಮನೆ ಮನೆಗೆ ಭೇಟಿ ನೀಡಿ ಎಲ್ಲಿ ಬೆಲೆ ಬಾಳುವ ವಸ್ತುಗಳಿವೆ ಎಂದು ಕಣ್ಣಲ್ಲೇ ಸರ್ವೇ ನಡೆಸಿ ದರೋಡೆ ನಡೆಸುತ್ತಿದ್ದ ತಂಡವೊಂದನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಗೌರಿಕಿಶೋರಿ, ನೀರು ಆದಾ ಎಂಬುವವರೇ ಬಂಧಿತ ಮಹಿಳೆಯರು.

ತುಪ್ಪ ಮಾರುವವರ ವೇಶದಲ್ಲಿ ದರೋಡೆ ನಡೆಸುತ್ತಿದ್ದ ತಂಡದ ಸದಸ್ಯರು ಮನೆ ಮನೆಗೆ ಬರುತ್ತಿದ್ದರು. ಗುಜರಾತಿ ಗಿರ್ ತಳಿಯ ಹಸುವಿನ ತುಪ್ಪ ಎಂದು ಮಾರಾಟ ಮಾಡುತ್ತಿದ್ದರು. ತುಪ್ಪ ಮಾರಾಟ ಮಾಡುವಾಗ ಮನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುತ್ತಿದ್ದರು.

ಆನಂತರ ಎರಡೇ ದಿನಕ್ಕೆ ಲೂಟಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಈ ತಂಡದ ಸದಸ್ಯರ ಮೇಲೆ ನಕಲಿ ಚಿನ್ನ ಮಾರಾಟ ಮಾಡಿದ ಆರೋಪವೂ ಇದೆ ಎಂದು ತಿಳಿದುಬಂದಿದೆ.

driving
- Advertisement -

Related news

error: Content is protected !!