- Advertisement -
- Advertisement -


ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಬೈಯಂಡಹಳ್ಳಿಯಲ್ಲಿ ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿದ್ದು ರಾಜಸ್ಥಾನ ಮೂಲದ ಆರೋಪಿ ಬಾಬುಲಾಲ್(40) ಬಂಧನವಾಗಿದೆ. ಬಂಧಿತನಿಂದ 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಂಎಫ್ ಜಾಗೃತಿ ದಳದ ಅಶೋಕ್, ಜಯರಾಮ್, ಡಿ ಸುರೇಶ್ ತಂಡದೊಂದಿಗೆ ನೆಲಮಂಗಲ ಉಪವಿಭಾಗ ಡಿವೈಎಸ್ಪಿ ಗೌತಮ್ ದಾಳಿ ನಡೆಸಿ ರಾಜಸ್ಥಾನ ಮೂಲದ ಬಾಬು ಲಾಲ್ನನ್ನು ಬಂಧಿಸಿ, ಆರೋಪಿಯಿಂದ 15 ಲಕ್ಷ ಮೌಲ್ಯದ ವಸ್ತುಗಳು, ತುಪ್ಪ, ಸ್ಟೌವ್, 2 ಸಿಲಿಂಡರ್ ಸೇರಿದಂತೆ ಇತರೆ ಬಳಕೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಈ ಮೊದಲು ಬಟ್ಟೆ ವ್ಯಾಪಾರ ಮಾಡ್ತಿದ್ದ ಲಾಸ್ ಆದ ಕಾರಣ ನಕಲಿ ತುಪ್ಪ ತಯಾರಿಕೆಗೆ ಮುಂದಾಗಿದ್ದ ಎಂದು ತಿಳಿದು ಬಂದಿದೆ.


- Advertisement -








