Sunday, June 14, 2026
spot_imgspot_img
spot_imgspot_img

ನಾಗವಲ್ಲಿಯಾಗಲು ಒಪ್ಪಿಗೆ ಕೊಟ್ಟ ಅನುಷ್ಕಾ ಶೆಟ್ಟಿ

- Advertisement -
- Advertisement -

ನಟಿ ಅನುಷ್ಕಾ ಶೆಟ್ಟಿ ಈಗೇಕೋ ಕೊಂಚ ಸೈಲೆಂಟ್​ ಆಗಿದ್ದಾರೆ ಇತ್ತೀಚೆಗೆ ಅವರು ಮಾಡುತ್ತಿರುವ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಕ್ಕೆ ಹಿಟ್​ ಆಗುತ್ತಿಲ್ಲ. ಇದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಇದೆ. ಈ ವೇಳೆಗೆ ಸರಿಯಾಗಿ ಕಾಲಿವುಡ್​ನಿಂದ ಒಂದು ಮಾಹಿತಿ ಕೇಳಿಬಂದಿದೆ. ರಾಘವ ಲಾರೆನ್ಸ್​ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನಾಗವಲ್ಲಿ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.

2006ರಲ್ಲಿ ತಮಿಳಿನಲ್ಲಿ ‘ಚಂದ್ರಮುಖಿ’ ಸಿನಿಮಾ ತೆರೆಕಂಡಿತ್ತು. ತೆಲುಗಿಗೂ ಡಬ್​ ಆಗಿ ಆ ಚಿತ್ರ ಬಿಡುಗಡೆ ಆಗಿತ್ತು. ಅದರ ಮುಂದುವರಿದ ಭಾಗ ಎಂಬಂತೆ ತೆಲುಗಿನಲ್ಲಿ ‘ನಾಗವಲ್ಲಿ’ ಚಿತ್ರ ನಿರ್ಮಾಣವಾದಾಗ ಅದರಲ್ಲಿ ನಾಗವಲ್ಲಿ ಪಾತ್ರ ಮಾಡುವ ಅವಕಾಶ ಅನುಷ್ಕಾ ಶೆಟ್ಟಿಗೆ ಒಲಿದಿತ್ತು. ಈಗ ತಮಿಳಿನಲ್ಲಿ ‘ಚಂದ್ರಮುಖಿ’ ಸೀಕ್ವೆಲ್​ ಸಿದ್ಧವಾಗುತ್ತಿದೆ. ಅದಕ್ಕೆ ರಾಘವ ಲಾರೆನ್ಸ್​ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿಯೂ ನಾಗವಲ್ಲಿ ಪಾತ್ರಕ್ಕೆ ಅನುಷ್ಕಾ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆಯಂತೆ.

ಈಗಾಗಲೇ ರಾಘವ ಲಾರೆನ್ಸ್​ ಮತ್ತು ಅನುಷ್ಕಾ ಶೆಟ್ಟಿ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಂತಿಮವಾಗಿ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ. ‘ನಾಗವಲ್ಲಿ’, ‘ಅರುಂಧತಿ’ ರೀತಿಯ ಸೂಪರ್​ ನ್ಯಾಚುರಲ್​ ಕಥೆ ಇರುವ ಸಿನಿಮಾಗಳಲ್ಲಿ ಅನುಷ್ಕಾರನ್ನು ನೋಡಲು ಜನರು ಇಷ್ಟಪಡುತ್ತಾರೆ. ಆ ಕಾರಣಕ್ಕಾಗಿಯೇ ಅವರಿಗೆ ಈ ಆಫರ್​ ನೀಡಲಾಗಿದೆ ಎಂಬ ಮಾತು ಟಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

ಇನ್ನು ಅನುಷ್ಕಾ ಶೆಟ್ಟಿ ಈ ಸಿನಿಮಾಕ್ಕಾಗಿ ತಮ್ಮ ದೇಹ ವಿನ್ಯಾಸವನ್ನು ಒಂದಷ್ಟು ಬದಲಾಯಿಸಿಕೊಳ್ಳಬೇಕು ಎಂದು ನಿರ್ದೇಶಕ ರಾಘವ ಲಾರೆನ್ಸ್‌ ತಿಳಿಸಿದ್ದಾರಂತೆ. ಪಾತ್ರ ಹೇಗಿರುತ್ತೆ, ಸಿನಿಮಾ ಟೈಟಲ್ ಏನು ಎಂಬುದರ ಬಗ್ಗೆ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.

driving
- Advertisement -

Related news

error: Content is protected !!