Friday, April 26, 2024
spot_imgspot_img
spot_imgspot_img

ಪೊಗರು : ವಾರದಲ್ಲೇ 45 ರೂ.ಕೋಟಿಗೂ ಅಧಿಕ ಕಲೆಕ್ಷನ್ !

- Advertisement -G L Acharya panikkar
- Advertisement -

ಬೆಂಗಳೂರು: ‘ಪೊಗರು ಚಿತ್ರದ ಬಜೆಟ್‌ ₹31 ಕೋಟಿ. ಮೊದಲ ವಾರದಲ್ಲೇ ಕರ್ನಾಟಕದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌ ಆಗಿದ್ದು, ನಿರ್ಮಾಪಕರು ಖುಷಿಯಾಗಿದ್ದಾರೆ. ಇದು ನನಗೂ ಖುಷಿ’ ಎಂದು ನಟ ಧ್ರುವ ಸರ್ಜಾ ಹೇಳಿದರು.

ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರ ನೋಡಿದ ನನ್ನ ಹೆಂಡತಿಯೇ ನೀನೆಷ್ಟು ಕ್ರೂರಿಯಾಗಿದ್ದೀಯಾ ಎಂದು ಕೇಳಿದ್ದರು. ನಂತರ ತಂಗಿಯ ಜೊತೆಗಿನ ದೃಶ್ಯ ನೋಡಿ ಆ ಅಭಿಪ್ರಾಯ ಬದಲಾಯಿತು. ಉತ್ತರ ಕರ್ನಾಟಕದಲ್ಲಿ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೌಸ್‌ಫುಲ್‌ ಆಗಿದೆ ಎಂದರು.

8 ನಿಮಿಷದ ದೃಶ್ಯಕ್ಕೆ ಕತ್ತರಿ: ಸಿನಿಮಾ ಮಾಡುವುದು ಜನರಿಗಾಗಿ. ಕೆಲ ದೃಶ್ಯಗಳ ಕುರಿತು ಇದ್ದ ವಿವಾದವನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ. ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿದ್ದರೆ, ನಾವು ತೆಗೆಯುತ್ತಿದ್ದೆವು.

ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದು ಉದ್ದೇಶಪೂರ್ವಕವಲ್ಲ. ತಪ್ಪಿನಲ್ಲಿ ನನ್ನ ಜವಾಬ್ದಾರಿಯೂ ಇದೆ. ತಪ್ಪನ್ನು ತಿದ್ದಿಕೊಂಡಿದ್ದೇವೆ. ಯಾರಿಗಾದರೂ ಬೇಜಾರಾಗಿದ್ದಲ್ಲಿ, ನಿಮ್ಮ ಮನೆ ಮಗ ತಪ್ಪು ಮಾಡಿದ್ದಾನೆ, ದಯವಿಟ್ಟು ಕ್ಷಮಿಸಿ ಎಂದು ಧ್ರುವ ಸರ್ಜಾ ಹೇಳಿದರು.ಬ್ರಾಹ್ಮಣ ಸಮುದಾಯದ ಮುಖಂಡರಿಗೆ ದೃಶ್ಯಗಳನ್ನು ತೆಗೆಯಲಾದ ಸಿನಿಮಾವನ್ನು ನಿರ್ದೇಶಕರು ತೋರಿಸಿದ್ದು, ಇನ್ನೆರಡು ದಿನದೊಳಗಾಗಿ ಚಿತ್ರಮಂದಿರಗಳಲ್ಲೂ ಬರಲಿದೆ ಎಂದರು.

- Advertisement -

Related news

error: Content is protected !!