Thursday, April 25, 2024
spot_imgspot_img
spot_imgspot_img

ಪ್ರೋ ಕಬಡ್ಡಿ: ಯುಪಿ ಯೋಧಾ ವಿರುದ್ಧ ಪುಣೇರಿ ಪಲ್ಟನ್​ಗೆ ಜಯ

- Advertisement -G L Acharya panikkar
- Advertisement -

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ 79ನೇ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಪುಣೇರಿ ಪಲ್ಟನ್ 44-38 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. 14 ಪಂದ್ಯಗಳಲ್ಲಿ ಪುಣೇರಿ ಸಾಧಿಸಿದ 7ನೇ ಜಯ ಇದಾಗಿದೆ. ಆದರೆ ಯೋಧಾ ಇಷ್ಟೇ ಪಂದ್ಯಗಳಿಂದ 6ನೇ ಸೋಲನುಭವಿಸಿತು. ಐದನ್ನು ಮಾತ್ರ ಗೆದ್ದಿರುವ ಯೋಧಾ, ಮೂರನ್ನು ಟೈ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದ ಮತ್ತು ಸೋತ ತಂಡದ ಅಂಕ ದೊಡ್ಡ ಮಟ್ಟದಲ್ಲೇನು ಬದಲಾವಣೆ ಆಗಿಲ್ಲ. ಯುಪಿ ಯೋಧಾ ಪಾಯಿಂಟ್ ಟೇಬಲ್​ನಲ್ಲಿ ಏಳನೇ ಸ್ಥಾನದಲ್ಲಿದ್ದರೆ ಪುಣೇರಿ 8ನೇ ಸ್ಥಾನದಲ್ಲಿದೆ. 46 ಅಂಕದೊಂದಿಗೆ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಹರಿಯಾಣ ಸ್ಟೀಲರ್ಸ್ ಸ್ಥಾನ ಪಡೆದಿದೆ.

vtv vitla
vtv vitla

ಮೋಹಿತ್ ಗೊಯತ್ ಮತ್ತು ಅಸ್ಲಂ ಇನಾಮದಾರ್ ಅವರ ಮಿಂಚಿನ ಆಟದಿಂದಾಗಿ ಪುಣೇರಿ ಪಲ್ಡನ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯಭೇರಿ ಬಾರಿಸಿತು. ರೇಡರ್ ಮೋಹಿತ್ ಗೋಯತ್ 14 ಅಂಕ ಮತ್ತು ಅಸ್ಲಂ 12 ಅಂಕಗಳನ್ನು ರೇಡಿಂಗ್‌ನಲ್ಲಿ ತಂದುಕೊಟ್ಟರು. ಇದರಿಂದಾಗಿ ತಂಡವು ಗೆಲುವಿನತ್ತ ಮುನ್ನಡೆಯಿತು. ಯೋಧಾ ತಂಡದ ಸುರೇಂದರ್ ಗಿಲ್ 16 ಅಂಕ ಗಳಿಸಿದರು.

ಪಂದ್ಯದ ಮೊದಲಾರ್ಧದಲ್ಲಿ ಯುಪಿ ಯೋಧಾ 18 ಪಾಯಿಂಟ್ಸ್ ಕಲೆಹಾಕಿದರೆ, ಪುಣೇರಿ ಪಲ್ಟನ್ 21 ಪಾಯಿಂಟ್ಸ್‌ ಕಲೆಹಾಕಿ ಮುನ್ನಡೆ ಸಾಧಿಸಿತು. ಎರಡನೇ ಹಂತದಲ್ಲೂ ಕೂಡ ಯುಪಿ ಯೋಧಾವನ್ನ ಹಿಂದಿಕ್ಕಿದ ಪುಣೇರಿ ಪಲ್ಟನ್ 23 ಪಾಯಿಂಟ್ಸ್ ಕಲೆಹಾಕಿದರೆ, ಯುಪಿ ಯೋಧಾ 20 ಪಾಯಿಂಟ್ಸ್‌ ಮುಟ್ಟಿತು. ಕೊನೆಯಲ್ಲಿ ಪಂದ್ಯವನ್ನ ಪುಣೇರಿ ಪಲ್ಟನ್ 44-38 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿತು.

ಪಂದ್ಯ ಸೋತರು ಸಹ ಯುಪಿ ಯೋಧಾ ರೈಡಿಂಗ್ ಪಾಯಿಂಟ್ಸ್ ಗಳಲ್ಲಿ ಪುಣೇರಿ ತಂಡಕ್ಕಿಂತ ಮುಂದಿತ್ತು. ಯೋಧಾ 29 ರೈಡಿಂಗ್ ಪಾಯಿಂಟ್ಸ್‌ ಗಿಟ್ಟಿಸಿದ್ರೆ, ಪುಣೇರಿ ಪಲ್ಟನ್ 24 ಪಾಯಿಂಟ್ಸ್ ಕಲೆಹಾಕಿತು. ಆದ್ರೆ ಕ್ಷೇತ್ರ ರಕ್ಷಣೆಯಲ್ಲಿ ಎಡವಿದ ಯುಪಿ ಯೋಧಾ ಕೇವಲ 2 ಪಾಯಿಂಟ್ಸ್ ಪಡೆದ್ರೆ, ಪುಣೇರಿ ಪಲ್ಟನ್ 14 ಟ್ಯಾಕಲ್ ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಯುಪಿ ಯೋಧಾ ಪರ ಗಿಲ್‌ ಬರೋಬ್ಬರಿ 16 ಅಂಕ ತಂದಿತ್ತರು. ಪ್ರದೀಪ್‌ ನರ್ವಾಲ್‌ 6 ಅಂಕ ಗಳಿಸಿ ಈ ಕೂಟದಲ್ಲಿ ತಮ್ಮ ರೈಡಿಂಗ್‌ ಅಂಕವನ್ನು ನೂರಕ್ಕೆ ಏರಿಸಿದ ಸಾಧನೆ ಮಾಡಿದರು.

suvarna gold
- Advertisement -

Related news

error: Content is protected !!