Thursday, April 25, 2024
spot_imgspot_img
spot_imgspot_img

ಫಾಝಿಲ್ ಹಾಗೂ ಮಸೂದ್ ಮನೆಗೆ ಸಿಎಂ ಬೊಮ್ಮಾಯಿ ಭೇಟಿ.! ಹೈಕಮಾಂಡ್ ಗ್ರೀನ್ ಸಿಗ್ನಲ್.?

- Advertisement -G L Acharya panikkar
- Advertisement -

ಬಿಜೆಪಿ ಪಕ್ಷಕ್ಕೆ ಈಗಾಗಲೇ ಮುಸ್ಲಿಂ ವಿರೋಧಿ ಎಂಬ ಪಟ್ಟವಿದೆ. ಹೀಗಿರುವಾಗಲೇ ರಾಜ್ಯದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ನೇತೃತ್ವದ ಸರ್ಕಾರವಂತೂ ಕೋಮು ಸೌಹಾರ್ದ ಕಾಪಾಡುವಲ್ಲಿ ಅಕ್ಷರಷಃ ವಿಫಲ ವಾಗಿದ್ದು ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳು ಹಿಂದೂ ಮುಸ್ಲಿಂ ಸಮುದಾಯದ ನಡುವಿನ ಸಂಘರ್ಷಗಳು ಸರ್ಕಾರಕ್ಕೆ ತಲೆನೋವಾಗಿದೆ.

ಈ ಮಧ್ಯೆ ಪ್ರವೀಣ ನೆಟ್ಟಾರು ಹತ್ಯೆ ಬಳಿಕ ಸಿಎಂ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಹತ್ಯೆಯಾದ ಮುಸ್ಲಿಂ ಯುವಕರ ಮನೆಗೆ ಭೇಟಿ ನೀಡದ್ದು ಬಿಜೆಪಿಗೆ ತೀವ್ರ ಮುಜುಗರ ಸೃಷ್ಟಿಸಲು ಕಾಂಗ್ರೆಸ್, ಜೆಡಿಎಸ್ ಗೆ ಪ್ರಭಲ ಅಸ್ತ್ರ ದೊರಕಿಸಿದಂತಾಗಿದೆ. ಪ್ರವೀಣ್ ನೆಟ್ಟಾರು ಭೀಕರ ಹತ್ಯೆಗೆ ಸರ್ಕಾರ ಅತ್ಯಂತ ಕಾಳಜಿಯಿಂದ ಸ್ಪಂದಿಸಿದೆ. ಸ್ವತಃ ಸಿಎಂ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಪರಿಹಾರ ಚೆಕ್ ಹಸ್ತಾಂತರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪ್ರವೀಣ್ ಗೂ ಮುನ್ನ ಹತ್ಯೆಯಾದ ಮಸೂದ್ ಹಾಗೂ ಪ್ರವೀಣ್ ಹತ್ಯೆಯಾಗಿ ಎರಡು ದಿನಗಳ ಬಳಿಕ ಹತ್ಯೆ ಯಾದ ಫಾಝಿಲ್ ನಿವಾಸಕ್ಕೆ ಸಿಎಂ ಭೇಟಿ ನೀಡಿಲ್ಲ. ಈ ವರ್ತನೆ ಈಗ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಚರ್ಚೆ ಆರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಮುಸ್ಲಿಂ ವಿರೋಧಿ ಧೋರಣೆ ತೋರಿದ್ದಾರೆ. ಕೇವಲ ಹಿಂದೂ ಕಾರ್ಯಕರ್ತರ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ಬಿಜೆಪಿ ಹಾಗೂ ಸರ್ಕಾರದ ಸಚಿವರುಗಳು ಸಿಎಂಗೆ ಚುನಾವಣೆ ದೃಷ್ಟಿಯಿಂದಲಾದರೂ ಫಾಝಿಲ್ ಹಾಗೂ ಮಸೂದ್ ನಿವಾಸಕ್ಕೆ ಭೇಟಿ ನೀಡಬೇಕೆಂಬ ಮಾತು ಕೇಳಿಬಂದಿದೆ.

ಈ ವಿಚಾರಕ್ಕೆ ಪಕ್ಷದ ವರಿಷ್ಠರು ಕೂಡ ಸಹಮತ ವ್ಯಕ್ತಪಡಿಸಿದ್ದು, ಸಿಎಂ ಸಂಕಷ್ಟಕ್ಕೆ ಪರಿಹಾರ ಸಿಕ್ಕಂತಾಗಿದೆ. ಬೊಮ್ಮಾಯಿ ಮುಸ್ಲಿಂ ಕುಟುಂಬದ ಭೇಟಿಗೆ ಹೋಗಲು ಮನಸ್ಸಿದ್ದರೂ ಹೈಕಮಾಂಡ್ ಒಪ್ಪಿಗೆಗಾಗಿ ಕಾದಿದ್ದರು ಎನ್ನಲಾಗಿದೆ. ಈಗಾಗಲೇ‌ ರಾಜ್ಯದಲ್ಲಿ ನಡೆದಿರುವ ಹಿಜಾಬ್, ಹಲಾಲ್ ಕಟ್ ಸೇರಿದಂತೆ ಹಲವು ಸಂದರ್ಭದಲ್ಲಿ ರಾಜ್ಯ ಸರ್ಕಾರ ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿತವಾಗಿದೆ. ಹೀಗಾಗಿ ಮತ್ತೇ ಇದೇ ಅಭಿಪ್ರಾಯ ಮುಂದುವರೆಯುವುದು ಬೇಡ ಎಂಬ ಕಾರಣಕ್ಕೆ ಸಿಎಂಗೆ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಹೀಗಾಗಿ ಸದ್ಯದಲ್ಲೇ ಪ್ರತಿ ಪಕ್ಷಗಳ ಬಾಯಿ ಮುಚ್ಚಿಸಲು ಸಿಎಂ ಮಸೂದ್ ಮತ್ತು ಫಾಝಿಲ್ ಕುಟುಂಬದವರನ್ನು ಭೇಟಿ ಮಾಡಲಿದ್ದಾರಂತೆ.

- Advertisement -

Related news

error: Content is protected !!