Friday, March 29, 2024
spot_imgspot_img
spot_imgspot_img

ಬಂಟ್ವಾಳ: ಅ. 10ರಂದು ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರ ನಂದಾವರದಲ್ಲಿ ದಾಸರ ಪದ ಭಜನಾ ಸ್ಪರ್ಧೆ

- Advertisement -G L Acharya panikkar
- Advertisement -

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಜೀಪ ವಲಯ ಹಾಗೂ ಭಜನಾ ಸ್ಪರ್ಧಾ ಸಂಚಾಲನಾ ಸಮಿತಿ ನಂದಾವರ ವತಿಯಿಂದ ಅ. 10ರಂದು ಬೆಳಗ್ಗೆ 7.30 ರಿಂದ 4.30 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಭಜನಾ ಮಂಡಳಿಗಳ ‘ದಾಸರ ಪದ ಭಜನಾ ಸ್ಪರ್ಧೆಯು’ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರ ನಂದಾವರದಲ್ಲಿ ನಡೆಯಲಿದೆ.

ಬೆಳಿಗ್ಗೆ 7.30 ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ಶ್ರೀ ಕ್ಷೇತ್ರ ನಂದಾವರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಅನುಗ್ರಹ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ದಕ್ಷಿಣ ಪ್ರಾಂತ ಬಜರಂಗದಳ ಸಂಯೋಜಕರಾದ ಕೆ. ಆರ್ ಸುನಿಲ್ ಹಾಗೂ ಯುವ ಉದ್ಯಮಿ ಪ್ರಕಾಶ್ ಪೂಜಾರಿ ಗುರುಮಂದಿರ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸಂಜೆ 4.30 ಕ್ಕೆ ನಡೆಯಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ನಂದಾವರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣರವರು ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ.ಪ್ರಭಾಕರ್ ಭಟ್ ಕಲ್ಲಡ್ಕ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ವೆಲ್ ಭಾಗವಹಿಸಲಿದ್ದಾರೆ.

ಬಹುಮಾನ:
ಪ್ರಥಮ ಗೌರವ ಪ್ರೋತ್ಸಾಹ: ರೂ.10000 ಹಾಗೂ ಸ್ಮರಣಿಕೆ
ದ್ವಿತೀಯ ಗೌರವ ಪ್ರೋತ್ಸಾಹ: ರೂ.5000 ಹಾಗೂ ಸ್ಮರಣಿಕೆ
ತೃತೀಯ ಗೌರವ ಪ್ರೋತ್ಸಾಹ: ರೂ.3000 ಹಾಗೂ ಸ್ಮರಣಿಕೆ
ಚತುರ್ಥ ಗೌರವ ಪ್ರೋತ್ಸಾಹ: ರೂ.2000 ಹಾಗೂ ಸ್ಮರಣಿಕೆ


ಸ್ಪರ್ಧಿಸಿದ ಎಲ್ಲಾ ಭಜನಾ ಮಂಡಳಿಗಳಿಗೂ ಗೌರವ ಸ್ಮರಣಿಕೆ ಮತ್ತು ಸ್ಪರ್ಧಿಸಿದ ಮಂಡಳಿಗಳ ಎಲ್ಲಾ ಭಜಕರಿಗೂ ಗೌರವ ಪತ್ರ ನೀಡಿ ಗೌರವಿಸಲಾಗುವುದು. ಹಾಗೂ ಸ್ಪರ್ಧೆಯಲ್ಲಿ ಭಜಿಸುವ ಅತ್ಯುತ್ತಮ ಭಜಕರನ್ನು ವೈಯಕ್ತಿಕವಾಗಿ ಗುರುತಿಸಿ ಗೌರವಿಸಲಾಗುವುದು.

ಎಲ್ಲಾರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಜೀಪ ವಲಯದ ಪ್ರಮುಖರು ಹಾಗೂ ಭಜನಾ ಸ್ಪರ್ಧಾ ಸಂಚಾಲನಾ ಸಮಿತಿ ನಂದಾವರದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:
7899008583, 9880747186

- Advertisement -

Related news

error: Content is protected !!