Saturday, May 4, 2024
spot_imgspot_img
spot_imgspot_img

ಬಂಟ್ವಾಳ: ನಾಪತ್ತೆಯಾಗಿದ್ದ ಅಪ್ರಾಪ್ತೆ ಯುವಕನ ಜೊತೆ ಪತ್ತೆ

- Advertisement -G L Acharya panikkar
- Advertisement -
vtv vitla

ಬಂಟ್ವಾಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ಪುಂಜಾಲಕಟ್ಟೆ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದಾರೆ.

ಇಲ್ಲಿನ ಪಾಂಡವರಕಲ್ಲು ಎಂಬಲ್ಲಿನ ಹತ್ತನೇ ತರಗತಿ ಬಾಲಕಿಯೋರ್ವಳು ಕಾಣೆಯಾಗಿದ್ದ ಬಗ್ಗೆ ಹೆತ್ತವರು ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಕಿಡ್ನಾಪ್ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಚರಣೆ ನಡೆಸಿದ ಪುಂಜಾಲಕಟ್ಟೆ ಎಸ್.ಐ. ಸುತೇಶ್ ಬಾಲಕಿ ಹಾಗೂ ಆರೋಪಿ ಯುವಕನನ್ನು ಉಪ್ಪಿನಂಗಡಿಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆರೋಪಿ ಯುವಕ ನೌಶಾದ್ ಪಾಂಡವರಕಲ್ಲು ಬಾಲಕಿಯ ನೆರೆ ಮನೆಯವನಾಗಿದ್ದಾನೆ ಎಂದು ತಿಳಿದು ಬಂದಿದೆ. ಪೋಲೀಸರನ್ನು ಇಬ್ಬರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದು, ಕಿಡ್ನಾಪ್ ಮಾಡಿದ್ದಾನಾ? ಅಥವಾ ಬಾಲಕಿ ಆತನ ಜೊತೆಗೆ ಇಷ್ಟ ಪಟ್ಟು ಹೋಗಿದ್ದಾಳಾ ಎಂಬುದು ಗೊತ್ತಾಗಬೇಕಿದೆ.

- Advertisement -

Related news

error: Content is protected !!