Wednesday, April 24, 2024
spot_imgspot_img
spot_imgspot_img

ಬಂಟ್ವಾಳ: ಸ್ನೇಹ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ನರೇಗಾ ಯೋಜನೆಯಡಿ ಹೂಳೆತ್ತುವ ಕಾರ್ಯ

- Advertisement -G L Acharya panikkar
- Advertisement -

ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮದ LRLMನ ಸ್ನೇಹ ಸಂಜೀವಿನಿ ಒಕ್ಕೂಟದ ಸದಸ್ಯರು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಒಕ್ಕೂಟದ ಮಹಿಳೆಯರು ತೋಡಿನ ಹೂಳೆತ್ತುವ ಕೆಲಸವನ್ನು ಸತತ 10 ದಿನಗಳಿಂದ ಮಾಡುತ್ತಿದ್ದು ಇನ್ನೂ 3,4 ತೋಡಿನ ಕೆಲಸವನ್ನು ಮಾಡಲಿದ್ದಾರೆ.

ಇದರಲ್ಲಿ ಒಟ್ಟು 20 ಸದಸ್ಯರು ಭಾಗವಹಿಸಿದ್ದು ತೋಡಿನಲ್ಲಿ ತುಂಬಿದ ಪ್ಲಾಸ್ಟಿಕ್, ಹಳೆ ಬಟ್ಟೆ, ದಟ್ಟವಾದ ಸಸ್ಯಗಳಿಂದ ಕೂಡಿ ತೋಡಿನಲ್ಲಿ ನೀರು ಸರಾಗವಾಗಿ ಹರಿಯುವುದು ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ನೀರು ತೋಟಕ್ಕೆ ನುಗ್ಗಿ ಅಧಿಕ ಪ್ರಮಾಣದ ಬೆಳೆ ನಷ್ಟ್ಟವಾಗುತಿತ್ತು, ಅಲ್ಲದೆ ನಡೆಯಲು ಬದುಗಳಿಲ್ಲದೆ ತೋಟಕ್ಕೆ ಹೋಗುವುದು ಕಷ್ಟಕರವಾಗಿತ್ತು.

ಸಂಜೀವಿನಿ ಮಹಿಳೆಯರ ಪರಿಶ್ರಮದಿಂದ ನೀರಿನ ಹರಿವು ಸರಾಗವಾಗಲಿದ್ದು, ತೋಟಗಳಿಗೆ ನೀರು ಹೋಗುದನ್ನು ತಪ್ಪಿಸಬಹುದಾಗಿದೆ ಇದರಿಂದ ಸಮೀಪದ ಸಾರ್ವಜನಿಕರಿಗೆ ಸಂತಸ ತಂದಿದೆ. ಎಂ.ಬಿ.ಕೆ ಸವಿತಾ ದಿನೇಶ್ ಆಚಾರ್ಯ ,ಹಾಗೂ ಎಲ್.ಸಿ.ಆರ್.ಪಿ ಜಯಂತಿ ಭಾರತ್ ರವರ ಸಹಕಾರದಲ್ಲಿ ನಡೆದ ಈ ಕೆಲಸಕ್ಕೆ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ ಹಾಗೂ ಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಉತ್ತಮ ಪ್ರೋತ್ಸಾಹ ಹಾಗೂ ಸಲಹೆಯನ್ನು ನೀಡುತ್ತಿದ್ದಾರೆ.

- Advertisement -

Related news

error: Content is protected !!