Saturday, April 27, 2024
spot_imgspot_img
spot_imgspot_img

ಬೆಳ್ತಂಗಡಿ : ಡಿಕೆಶಿ ಆಗಮಿಸಿದ ಹೆಲಿಕಾಪ್ಟರ್‌ ದಿಢೀರ್‌ ತಪಾಸಣೆ; ಚುನಾವಣಾಧಿಕಾರಿಗಳ ಜತೆ ಪೈಲೆಟ್ ಮಾತಿನ ಚಕಮಕಿ

- Advertisement -G L Acharya panikkar
- Advertisement -

ಬೆಳ್ತಂಗಡಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದು, ಹೆಲಿಪ್ಯಾಡ್ ನಲ್ಲಿ ಕುಟುಂಬ ಸಮೇತ ಬಂದಿಳಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳು ರಾಜಕಾರಣಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದಾಗಲೂ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲನೆ ನಡೆಸಲಾಗಿತ್ತು.

‌ತಪಾಸಣೆಗೆ ಮುಂದಾದ ಚುನಾವಣಾಧಿಕಾರಿಗಳ ಜತೆ ಪೈಲೆಟ್ ಮಾತಿನ ಚಕಮಕಿ ನಡೆಸಿದ್ದು, ಇದು ಖಾಸಗಿ ಹೆಲಿಕಾಪ್ಟರ್, ಪರಿಶೀಲಿಸಲು ಅವಕಾಶವಿಲ್ಲವೆಂದರು ಹೇಳಿದರೂ, ಹೆಲಿಕಾಪ್ಟರ್ ಚುನಾವಣಾಧಿಕಾರಿಗಳು ತಪಾಸಣೆ ಮಾಡಿದರು. ಇದರೊಂದಿಗೆ ಡಿಕೆಶಿ ಅವರ ಬಟ್ಟೆ-ಬರೆಗಳಿದ್ದ ಸೂಟ್ ಕೇಸ್ ತಪಾಸಣೆ ಮಾಡಿದರು. ಡಿಕೆಶಿ ಅವರ ಪತ್ನಿ ಉಷಾ, ಮಗ, ಪುತ್ರಿ, ಅಳಿಯ ಇವರು ಪ್ರತ್ಯೇಕ ಹೆಲಿಕಾಪ್ಟರ್​​ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದರು.

- Advertisement -

Related news

error: Content is protected !!