- Advertisement -
- Advertisement -

ಬೆಳ್ತಂಗಡಿ : ಕೆಲಸ ಮುಗಿದ ರಾತ್ರಿ ಮನೆಗೆ ವಾಪಸ್ ಅಗುವಾಗ ಬೈಕ್ ಸ್ಪೀಡ್ ಅಗಿ ಸವಾರ ಸಾವನ್ನಪ್ಪಿದ್ದು ಸಹಸವಾರ ಸಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಶಾರದಾನಗರದಲ್ಲಿ ನಡೆದಿದೆ.
ಸೋಮಂದಡ್ಕದಿಂದ ಆದಿತ್ಯವಾರ ರಾತ್ರಿ ಹನ್ನೊಂದು ಗಂಟೆಗೆ ಕೆಲಸ ಮುಗಿಸಿ ಕಡಿರುದ್ಯಾವರ ಮನೆಗೆ ವಾಪಸ್ ಬೈಕ್‌ನಲ್ಲಿ ಬರುತ್ತಿದ್ದಾಗ ಮುಂಡಾಜೆ ಗ್ರಾಮದ ಶಾರದಾ ನಗರದ ಬಳಿ ಬೈಕ್ ಸ್ಕಿಡ್ ಆಗಿ ಸವಾರ ಕಡುರುದ್ಯಾವರ ನಿವಾಸಿ ಯಶೋಧರ ದೇವಾಡಿಗ(30) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹಸವಾರ ಕಡುರುದ್ಯಾವರ ನಿವಾಸಿ ಅಶೋಕ್ ಗೌಡ (32) ಸಣ್ಣ-ಪುಟ್ಟ ಗಾಯಗಳಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


- Advertisement -








