Saturday, April 20, 2024
spot_imgspot_img
spot_imgspot_img

ಬೆಳ್ತಂಗಡಿ: ವೈದ್ಯರ ಟ್ವಿಟರ್ ಖಾತೆ ಹ್ಯಾಕ್; ದೂರು ದಾಖಲು..!

- Advertisement -G L Acharya panikkar
- Advertisement -
vtv vitla
vtv vitla

ಬೆಳ್ತಂಗಡಿ: ತಾಲೂಕಿನ ಉಜಿರೆಯ ಬೆನಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಶಾಂತನು ಆರ್ ಪ್ರಭು ಅವರು ತಮ್ಮ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿ, “ಹ್ಯಾಕರ್‌ಗಳು, ಹಿಜಾಬ್ ನಾವು ಬಯಸುವುದಿಲ್ಲ. ಹಿಜಾಬ್ ಹಾಕಲು ಇದು ತಾಲಿಬಾನ್ ಅಥವಾ ಸೌದಿ ಅರಬಿಯಾ ಅಲ್ಲ. ಮದ್ರಸವೂ ಅಲ್ಲ. ಇದು ಶಿಕ್ಷಣ ಸಂಸ್ಥೆ. ನಿಮಗೆ ಹಿಜಾಬ್ ಬೇಕಾದರೆ ಮದ್ರಸಕ್ಕೆ ಹೋಗಿ ಎಂಬಿತ್ಯಾದಿಯಾಗಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಲಿಫಾ ಶೈಖ್ ಎಂಬವರು ವಿರೋಧಿಸಿ ಪ್ರತ್ಯುತ್ತರ ನೀಡಿದ್ದು, ಅದರ ಸ್ಕ್ರೀನ್ ಶಾಟ್ ಮತ್ತು ವೈದ್ಯರು ಮಗುವೊಂದನ್ನು ಎತ್ತಿಕೊಂಡಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಡಾ.ಶಾಂತನು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Twitter lost control of its internal systems to Bitcoin-scamming hackers |  Ars Technica

ಈ ಬಗ್ಗೆಪ್ರತಿಕ್ರಿಯಿಸಿರುವ ಡಾ.ಶಂತನು, ” ಹ್ಯಾಕರ್‌ಗಳು ಹಿಜಾಬ್‌ ವಿರೋಧಿಸುವ ಟ್ವೀಟ್ ಅನ್ನು ಬಳಸಿಕೊಂಡು, ಕೆಲವು ಜನರು ಕರ್ತವ್ಯದಲ್ಲಿರುವ ಬೆನಕ ಆಸ್ಪತ್ರೆಯ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಓದಿರುವ ನನಗೆ ಹಿಜಾಬ್ ಬಗ್ಗೆ ತಿಳಿದಿದೆ. ಹೀಗಾಗಿ ಯಾರೋ ತಮ್ಮ ಪ್ರತಿಮೆಗೆ ಧಕ್ಕೆ ತರುವ ಯತ್ನ ನಡೆಸಿದ್ದು, ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!