Thursday, June 18, 2026
spot_imgspot_img
spot_imgspot_img

ಮಂಗಳೂರು: “ರಿವೆಂಜ್’ಗಾಗಿ ನಡೆಯಿತು ಮತ್ತೊಂದು ಮರ್ಡರ್‍” ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ.!!

- Advertisement -
- Advertisement -

ಮಂಗಳೂರು : ಬೈಕಂಪಾಡಿ ಮೀನಕಳಿಯ ನಿವಾಸಿ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ರಾಜ (29) ಎಂಬಾತನಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಗಂಭೀರ ಗಾಯಗೊಂಡ ಆತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸಂಜೆ ಬೀಚ್ ನಲ್ಲಿದ್ದ ರಾಜಾನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ನಿನ್ನೆಯ ದಿನ ಸಾವು ಆತನ ಮನೆ ಮಂದಿ ಶಾಕ್ ನೀಡಿದಂತೂ ಸುಳ್ಳಲ್ಲ.

ಸೋಮವಾರ ರಾತ್ರಿ 7.30 ರ ಸುಮಾರಿಗೆ ಬೈಕಂಪಾಡಿ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ರಾಘವೇಂದ್ರ ಅವರ ಪರಿಚಯಸ್ಥರೇ ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ತಲವಾರು, ಮತ್ತು ಚಾಕುವಿನಿಂದ ಮುಖ, ತಲೆ , ಕೈಗೆ ಹೊಡೆದಿದ್ದರು. ಹಲ್ಲೆಗೊಳಗಾದವನ ಮೇಲೆ ಪಣಂಬೂರು ಠಾಣೆಯಲ್ಲಿ ಈ ಹಿಂದೆ ರೌಡಿಶೀಟ್ ತೆರೆಯಲಾಗಿದ್ದು, ಕೊಲೆ ಯತ್ನ ಕೊಲೆ ಆರೋಪವಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!