Friday, April 19, 2024
spot_imgspot_img
spot_imgspot_img

‌ಮತ್ತೊಂದು ಆಸಿಡ್ ದಾಳಿ ಪ್ರಕರಣ; ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಿಯಕರ

- Advertisement -G L Acharya panikkar
- Advertisement -

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಆಸಿಡ್ ದಾಳಿ ಘಟನೆ ಮಾಸುವ ಮುನ್ನವೇ ಮತ್ತೊಂದು ಕ್ರೂರ ಘಟನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದೆ. ಮಹಿಳೆಯೊಬ್ಬರ ಮೇಲೆ ಪ್ರಿಯಕರ ಆಸಿಡ್ ದಾಳಿ ನಡೆಸಿ ವಿಕೃತಿ ಮೆರೆದಿದ್ದಾನೆ.

ಸಂತ್ರಸ್ತೆ ಇಂದು ಬೆಳಗ್ಗೆ ಕೆ.ಎಸ್.ಲೇಔಟ್‌ ನಿಂದ ಜೆ.ಪಿ. ನಗರದ ಕಡೆ ಹೋಗುತ್ತಿದ್ದರು. ಈ ವೇಳೆ ಹಿಂದೆ ಫಾಲೋ ಮಾಡಿಕೊಂಡು ಬಂದ ಗೋರಿಪಾಳ್ಯದ ಅಹಮದ್‌ ಎಂಬಾತ ಮಹಿಳೆಯ ಮೇಲೆ ಆಸಿಡ್ ಎರಚಿದ್ದಾನೆ.

ಸಂತ್ರಸ್ತ ಮತ್ತು ಅಹಮದ್‌ ಇಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದರಂತೆ, ಈಗಾಗಲೇ ಈ ಮಹಿಳೆಗೆ ಬೇರೊಬ್ಬನ ಜೊತೆ ಮದ್ವೆಯಾಗಿ ಒಬ್ಬ ಮಗಳಿದ್ದಾಳೆ. ಆದರೂ ಅಹಮದ್ ಮತ್ತು ಮಹಿಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಹಾಗಾಗಿ ತನ್ನನ್ನು ಮದುವೆಯಾಗುವಂತೆ ಆಕೆಗೆ ಅಹಮದ್ ಒತ್ತಾಯಿಸುತ್ತಿದ್ದ. ಮದುವೆ ಆಗಲು ಮಹಿಳೆ ಕಾಲಾವಕಾಶ ಕೇಳಿದ್ದರಂತೆ, ಬೇಗ ಮದುವೆಯಾಗುವಂತೆ ಪೀಡಿಸುತ್ತಿದ್ದ ಅಹಮದ್‌, ಇದೇ ವಿಚಾರಕ್ಕೆ ಪದೇ ಪದೆ ಜಗಳ ತೆಗೆಯುತ್ತಿದ್ದ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವೂ ಆಗಿತ್ತು. ಸಿಟ್ಟಿಗೆದ್ದ ಅಹಮದ್, ಇಂದು ಬೆಳಗ್ಗೆ ಮಹಿಳೆಯನ್ನು ಫಾಲೋ ಮಾಡಿಕೊಂಡು ಹೋಗಿ ಸಾರಕಿ ಸಿಗ್ನಲ್ ಬಳಿ ಆಕೆಯನ್ನು ಅಡ್ಡಗಟ್ಟಿ ಮುಖಕ್ಕೆ ಆಸಿಡ್‌ ಎರಚಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಬಲಗಣ್ಣು ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

vtv vitla
- Advertisement -

Related news

error: Content is protected !!