Tuesday, May 7, 2024
spot_imgspot_img
spot_imgspot_img

ಮಾ.12: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಸಭಾಭವನ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ; ಐಸಿರಿ ಕಲಾವಿದೆರ್ ಮಂಜೇಶ್ವರ ತಂಡದಿಂದ “ಅಂಚಗೆ ಇಂಚಗೆ” ತುಳು ಹಾಸ್ಯಮಯ ನಾಟಕ

- Advertisement -G L Acharya panikkar
- Advertisement -
vtv vitla
vtv vitla

ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಸಭಾಭವನ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವು ಮಾ.12(ನಾಳೆ)ರಂದು ಸಂಜೆ 4ಕ್ಕೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವು ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಶಾಸಕರು ಸಂಜೀವ ಮಠಂದೂರು, ದಿವಾಕರ್ ದಾಸ್ ನೇರ್ಲಾಜೆ ಎಸ್.ಎಲ್.ವಿ ಗ್ರೂಪ್ಸ್ ಮೈಸೂರು, ಮಂಗಳೂರು, ಬೂಡಿಯಾರ್ ರಾಧಾಕೃಷ್ಣ ರೈ ಜಿಲ್ಲಾ ಉಪಾಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಯೋಗೀಶ್ ಕುಡ್ವ, ಚಿನ್ನಪ್ಪ ಗೌಡ ಗಾಳಿಗುಡ್ಡೆ, ಪಿ.ಡಿ.ಓ ಅಳಿಕೆ ಗ್ರಾ. ಪಂ ಭಾಗವಹಿಸಲಿದ್ದಾರೆ.

ಸಾಮಾಜಿಕ ಕಾರ್ಯಕರ್ತರು ಸುರೇಶ್ ಪರ್ಕಳ ಧಾರ್ಮಿಕ ಭಾಷಣ ನಡೆಸಲಿದ್ದಾರೆ.

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರು ಗಣೇಶ್ ಭಟ್ ಸನ್ಮಾನಿಸಲ್ಪಡಲಿದ್ದಾರೆ.

9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾತ್ರಿ 9.00ಕ್ಕೆ
ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ, ಗಡಿನಾಡ ಕಲಾನಿಧಿ ಕೃಷ್ಣ ಜೆ. ಮಂಜೇಶ್ವರ ರಚನೆಯ, ನವೀನ್ ಡಿ ಪಡೀಲ್, ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ ಅಭಿನಯಿಸುವ “ಅಂಚಗೆ ಇಂಚಗೆ” ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಸ್ನೇಹಬಂಧು ಸಹಾಯನಿಧಿ ಯೋಜನೆ ಇದರ ವತಿಯಿಂದ ಪ್ರತಿ ತಿಂಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುತ್ತಿದ್ದು, ಈ ಯೋಜನೆಯಲ್ಲಿ ಸೇರಲಿಟ್ಟಿಸುವವರು ಪ್ರತಿ ತಿಂಗಳು 200 ರೂ. ಮೇಲ್ಪಟ್ಟು ಸಹಾಯನಿಧಿ ಯೋಜನೆ ಬ್ಯಾಂಕ್ ಖಾತೆಗೆ ಜಮೆ ಮಾಡಿ ಸಮಾಜದ ಆಶಕ್ತರ ಕಣ್ಣೀರೊರೆಸುವ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿ ಅಪೇಕ್ಷಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲಾ ಭಗವದ್ಭಕ್ತರು ಭಾಗವಹಿಸಬೇಕಾಗಿ ವಿಷ್ಣುಮೂರ್ತಿ ಯುವಕ ವೃಂದದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!