Saturday, April 27, 2024
spot_imgspot_img
spot_imgspot_img

ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ₹100 ಲಕ್ಷ ಕೋಟಿ ಮೌಲ್ಯದ ಗತಿಶಕ್ತಿ ಯೋಜನೆಗೆ ಇಂದು ಪ್ರಧಾನಿ ಮೋದಿ ಚಾಲನೆ

- Advertisement -G L Acharya panikkar
- Advertisement -
driving

ನವದೆಹಲಿ: ವಿವಿಧ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.

ಗತಿಶಕ್ತಿ ಯೋಜನೆಯು ಮೂಲಸೌಕರ್ಯ ಕ್ಷೇತ್ರದ ಐತಿಹಾಸಿಕ ಘಟನೆಯಾಗಲಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ತಿಳಿಸಿದೆ.

ಇಲಾಖೆಗಳು ಪರಸ್ಪರ ಯೋಜನೆಗಳ ಬಗ್ಗೆ ಕೇಂದ್ರೀಕೃತ ಪೋರ್ಟಲ್‌ ಮೂಲಕ ತಿಳಿಯಬಹುದಾಗಿದೆ ಮತ್ತು ಬಹು-ಮಾದರಿ ಸಂಪರ್ಕ ವ್ಯವಸ್ಥೆಯು, ಜನರು, ಸರಕು ಮತ್ತು ಸೇವೆಗಳ ಸಮಗ್ರ ಮತ್ತು ತಡೆರಹಿತ ಸಂಚಾರಕ್ಕೆ ಅವಕಾಶ ನೀಡಲಿದೆ.

ಈ ಯೋಜನೆಯು ಸಮಗ್ರತೆ, ಆದ್ಯತೆ, ಆಶಾವಾದ, ಒಟ್ಟುಗೂಡುವಿಕೆ, ವಿಶ್ಲೇಷಣಾತ್ಮಕತೆ ಮತ್ತು ಕ್ರಿಯಾತ್ಮಕತೆ ಎಂಬ ಆರು ವಿಚಾರಗಳನ್ನು ಆಧರಿಸಿದೆ.

ಯೋಜನೆಯಿಂದ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಪೂರೈಕೆಯ ಸರಪಳಿ ಸುಧಾರಣೆಯಾಗಲಿದೆ. ಇದರಿಂದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಹುದಾಗಿದೆ ಎಂದೂ ಪಿಎಂಒ ತಿಳಿಸಿದೆ.

- Advertisement -

Related news

error: Content is protected !!