Saturday, June 20, 2026
spot_imgspot_img
spot_imgspot_img

ಮೂಲ್ಕಿ: ಲಾರಿ ದುರಸ್ತಿ ಮಾಡುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಇಬ್ಬರು ದುರ್ಮರಣ

- Advertisement -
- Advertisement -

ಮೂಲ್ಕಿ: ಪಂಕ್ಚರ್‍ ಆದ ಲಾರಿಯಲ್ಲಿ ದುರಸ್ತಿ ಮಾಡುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ ಘಟನೆ ಪಡುಪಣಂಬೂರು ಪೆಟ್ರೋಲ್ ಪಂಪಿನ ಬಳಿ ತಡರಾತ್ರಿ ನಡೆದಿದೆ. ಮಧ್ಯ ಪ್ರದೇಶದ ಬಬುಲು (23) ಅಚಲ್ ಸಿಂಗ್ (30) ಮೃತಪಟ್ಟ ದುರ್ದೈವಿಗಳು. ಕೇರಳ ನಿವಾಸಿ ಅನಿಶ್ (42) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಿಂದ ಕೇರಳಕ್ಕೆ ಪಡುಪಣಂಬೂರು ಹೆದ್ದಾರಿಯಾಗಿ ಸಾಗುತ್ತಿದ್ದಾಗ ಲಾರಿ ಪಂಕ್ಚರ್ ಆಗಿ ನಿಂತಿತ್ತು. ಇದನ್ನು ದುರಸ್ತಿಮಾಡಲು ಲಾರಿಯಲ್ಲಿದ್ದ ಮೂವರು ಸೇರಿ ಇಳಿದಿದ್ದರು. ಟಯರ್ ಬದಲಿಸುವಾಗ ಉಡುಪಿ ಕಡೆಯಿಂದ ಏಕಾಏಕಿ ಬಂದ ಕಾರು ಒಂದು ಮೂವರಿಗೂ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಿದೆ. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!