Wednesday, July 29, 2026
spot_imgspot_img
spot_imgspot_img

ವಿಟ್ಲ: ಇಂದಿನಿಂದ ಕಠಿಣ ರೂಲ್ಸ್ ಜಾರಿ: ಬೆಳ್ಳಂಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಪೇಟೆಗೆ ಜಮಾಯಿಸಿದ ಜನರು

- Advertisement -
- Advertisement -

ವಿಟ್ಲ: ಇಂದಿನಿಂದ ಬೆಳಿಗ್ಗೆ 6 ರಿಂದ 9 ಗಂಟೆಯವರೆಗಷ್ಟೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ಈ ಹಿನ್ನಲೆಯಲ್ಲಿ ವಿಟ್ಲ ಪೇಟೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಜನರು ಜಮಾಯಿಸಿದ್ದಾರೆ.

ನಿನ್ನೆ ಜಿಲ್ಲಾಧಿಕಾರಿಯವರು ಆದೇಶ ನೀಡಿದ ಬೆನ್ನಲ್ಲೇ ಇಂದು ಬೆಳಿಗ್ಗೆ 9 ಗಂಟೆಯ ಒಳಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ವಿಟ್ಲ ಪೇಟೆಗೆ ಬಂದಿದ್ದಾರೆ.

ಅಲ್ಲದೇ ವೀಕೆಂಡ್ ಕರ್ಫ್ಯೂ ಇರುವುದರಿಂದ ಅನೇಕ ಜನರು ಇಂದೇ ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಪೇಟೆಗೆ ಬಂದಿದ್ದಾರೆ.

ಮೆಡಿಕಲ್ ಗಷ್ಟೇ ಹೋಗಬಹುದು, ಅನಾವಶ್ಯಕವಾಗಿ ತಿರುಗಾಡಿದರೆ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರ ಆದೇಶವಿರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸಿರುವ ಜನರು ಇಂದು ಮುಂಜಾನೆಯೇ ವಿಟ್ಲ ಪೇಟೆಗೆ ಬಂದು ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಬೇಗನೆ ಮನೆ ಸೇರುತ್ತಿದ್ದಾರೆ.

driving
- Advertisement -

Related news

error: Content is protected !!