Tuesday, April 30, 2024
spot_imgspot_img
spot_imgspot_img

ವಿಟ್ಲ: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ 361 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ರಈಸ್ ಅಬ್ದುಲ್ಲ ರಿಗೆ ಅಭಿನಂದನೆ

- Advertisement -G L Acharya panikkar
- Advertisement -

ವಿಟ್ಲ ಸಮೀಪದ ಉಕ್ಕುಡ ಬದ್ರಿಯಾ ಜುಮಾ ಮಸೀದಿ ಅಧೀನದ ಮದ್ರಸದ 5ನೇ ತರಗತಿ ವಿದ್ಯಾರ್ಥಿ ರಈಸ್ ಅಬ್ದುಲ್ಲ ಅವರು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ 400 ರಲ್ಲಿ 361 ಅಂಕ ಗಳಿಸಿ ವಿಟ್ಲ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮಂಗಳವಾರ (03/05) ಈದ್ ದಿನದಂದು ಉಕ್ಕುಡ ಮಸೀದಿಯಲ್ಲಿ ಜಮಾಅತ್ ವತಿಯಿಂದ ಅಭಿನಂದಿಸಲಾಯಿತು.

ಉಕ್ಕುಡ ಜುಮಾ ಮಸೀದಿಯ ಮುದರ್ರಿಸ್ ಹಾಫಿಝ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಭಿನಂದಿಸಿ ಶುಭ ಕೋರಿದರು. ಈ ಸಾಧನೆಗೆ ಕಾರಣಕರ್ತರಾದ ಮದ್ರಸದ ಮುಖ್ಯಗುರು ಅಬ್ದುಲ್ ಹಮೀದ್ ಮದನಿ ಅವರನ್ನೂ ಸನ್ಮಾನಿಸಲಾಯಿತು. ಈ ಸಂದರ್ಭ ರಈಸ್ ಅಬ್ದುಲ್ಲ ಅವರ ಪಾಲಕರಾದ ಡಿ.ಎಂ. ರಶೀದ್ ದರ್ಬೆ, ಉಕ್ಕುಡ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಕಲ್ಲಂಗಳ, ಕಾರ್ಯದರ್ಶಿ ಶರೀಫ್ ತೈಬಾ, ಕೋಶಾಧಿಕಾರಿ ಡಿ.ಎಂ. ಅಬ್ದುಲ್ ರಹಿಮಾನ್, ಇಬ್ರಾಹಿಂ ಹಾಜಿ ನೆಕ್ಕರೆಕಾಡು ಉಪಸ್ಥಿತರಿದ್ದರು.

- Advertisement -

Related news

error: Content is protected !!