Friday, October 2, 2026
spot_imgspot_img
spot_imgspot_img

ವಿಟ್ಲ ಜುಮಾ ಮಸ್ಜಿದ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾಗಿ ಝುಬೈರ್ ಕಾರ್ಯದರ್ಶಿಯಾಗಿ ಅಬೂಬಕರ್ ನೋಟರಿ ಆಯ್ಕೆ

- Advertisement -
- Advertisement -
astr

ವಿಟ್ಲ : ಇಲ್ಲಿನ ಕೇಂದ್ರ ಜುಮಾ ಮಸ್ಜಿದ್ ಅಧೀನದ ವಿಟ್ಲ ಜಮಾತ್ ಎಜುಕೇಶನ್ ಟ್ರಸ್ಟ್ ಇದರ ವತಿಯಿಂದ ನಡೆಸಲ್ಪಡುವ ಹೊರೈಝನ್ ಪಬ್ಲಿಕ್ ಸ್ಕೂಲ್ ಇದರ ಆಡಳಿತ ಮಂಡಳಿಗೆ ನೂತನ ಸಾಲಿನ ಅಧ್ಯಕ್ಷರಾಗಿ ಉಪನ್ಯಾಸಕ ಝುಬೈರ್ ಮೇಗಿನಪೇಟೆ, ಕಾರ್ಯದರ್ಶಿಯಾಗಿ ನೋಟರಿ ಅಬೂಬಕರ್ ವಿಟ್ಲ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಟ್ರಸ್ಟ್ ನ ಅಧ್ಯಕ್ಷ ಇಕ್ಬಾಲ್ ಹೋನೆಸ್ಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ವಿ.ಕೆ.ಎಂ. ಅಶ್ರಫ್, ಕೋಶಾಧಿಕಾರಿಯಾಗಿ ಅಂದುಂಙಿ ಗಮಿ. ಜತೆ ಕಾರ್ಯದರ್ಶಿ ಆಗಿ ಅಬೂಬಕ್ಕರ್ ಸಿದ್ದಿಕ್ ಮಾಲಮೂಲೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ ಇಕ್ಬಾಲ್ ವಾರ್ಷಿಕ ವರದಿ ವಾಚಿಸಿದರು, ಕೋಶಾಧಿಕಾರಿ ವಿ.ಎಚ್. ಅಶ್ರಫ್ ಲೆಕ್ಕ ಪತ್ರ ಮಂಡಿಸಿದರು. ಜಮಾಅತ್ ಕಮಿಟಿ ಅಧ್ಯಕ್ಷ ಇಕ್ಬಾಲ್ ಶೀತಲ್, ಕಾರ್ಯಕಾರಿ ಸಮಿತಿ ಸದಸ್ಯರು, ಟ್ರಸ್ಟಿನ ಸದಸ್ಯರು, ಜಮಾತ್ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.

- Advertisement -

Related news

error: Content is protected !!