Wednesday, May 1, 2024
spot_imgspot_img
spot_imgspot_img

ವಿಟ್ಲ ಠಾಣಾ ಎಸ್. ಐ ವಿನೋದ್ ಕುಮಾರ್ ರೆಡ್ಡಿಯವರ ಕೋರಿಕೆ ಮೇರೆಗೆ ರಾಮನಗರ ಠಾಣೆಗೆ ವರ್ಗಾವಣೆ;

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಠಾಣಾ ಎಸ್. ಐ ವಿನೋದ್ ಎಸ್. ರೆಡ್ಡಿಯವರನ್ನು ಅವರ ಕೋರಿಕೆಯ ಮೇರೆಗೆ ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಆದೇಶ ಹೊರಡಿಸಿದ್ದಾರೆ.

2017ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ವಿನೋದ್ ಎಸ್. ರೆಡ್ಡಿಯವರು ಮಂಗಳೂರು ಕೇಂದ್ರ ಸ್ಥಾನದಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದರು.

ಬಳಿಕ ಉಡುಪಿ ಜೆಲ್ಲೆಯ ಹೆಜಮಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರೊಬೆಷನರಿ ಎಸ್.ಐ ಆಗಿ ವರ್ಗಾವಣೆಗೊಂಡು ಬಂದಿದ್ದರು.

ವಿಟ್ಲ ಠಾಣಾ ಎಸ್ ಐ ಆಗಿದ್ದ ಯಲ್ಲಪ್ಪರವರು ವರ್ಗಾವಣೆಗೊಂಡ ಬಳಿಕ ವಿನೋದ್ ಎಸ್. ರೆಡ್ಡಿರವರನ್ನು ವಿಟ್ಲ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವಿನೋದ್ ಎಸ್. ರೆಡ್ಡಿ ರವರು ಮೂಲತಃ ಬಾಗಲಕೋಟೆಯವರಾಗಿದ್ದು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ.

ವಿನೋದ್ ರೆಡ್ಡಿ ಯವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರು ಮುಂದೆ ತಮ್ಮ ಕುಟುಂಬದೊಂದಿಗೆ ಇರಲು ಬಯಸಿರುವ ಕಾರಣದಿಂದಾಗಿ ಮೇಲಾಧಿಕಾರಿಗೆ ತಮ್ಮ ಊರಿಗೆ ವರ್ಗಾವಣೆಗಾಗಿ ಮನವಿ ಸಲ್ಲಿಸಿದ್ದರು. ಅವರ ಕೋರಿಕೆ ಮೇರೆಗೆ ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ವಿನೋದ್ ರೆಡ್ಡಿಯವರು ವಿಟ್ಲದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇವರ ದಿಡೀರ್ ವರ್ಗಾವಣೆಯು ವಿಟ್ಲದ ಜನತೆಗೆ ತುಂಬಾನೇ ಬೇಸರವನ್ನುಂಟು ಮಾಡಿದೆ.

- Advertisement -

Related news

error: Content is protected !!