Monday, July 20, 2026
spot_imgspot_img
spot_imgspot_img

ವಿಟ್ಲ: ಬಿಜೆಪಿ ಮಹಾ ಶಕ್ತಿ ಕೇಂದ್ರದ 17 ಬೂತ್ ಅಧ್ಯಕ್ಷರ ಮನೆಗೆ ನಾಮಪಲಕ ಅಳವಡಿಕೆ ಕಾರ್ಯಕ್ರಮದ ಪೂರ್ವಭಾವಿ ಸಭೆ

- Advertisement -
- Advertisement -
driving

ವಿಟ್ಲ: ಬಿಜೆಪಿ ಮಹಾ ಶಕ್ತಿ ಕೇಂದ್ರದ 17 ಬೂತ್ ಅಧ್ಯಕ್ಷರ ಮನೆಗೆ ನಾಮಪಲಕ ಅಳವಡಿಕೆ ಕಾರ್ಯಕ್ರಮವು ಅ.17ರಂದು ಬೆಳಿಗ್ಗೆ 7.30 ರಿಂದ ಇಡಿ ದಿವಸ ರಾಜ್ಯ ಅಧ್ಯಕ್ಷರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲು ಮಾನ್ಯ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಹಾಗೂ ಜಿಲ್ಲಾ ಅಧ್ಯಕ್ಷರು ಮಂಡಲ ಅಧ್ಯಕ್ಷರು ಪದಾಧೀಕಾರಿಗಳು ಭಾಗವಹಿಸಲಿದ್ದು, ಅದರ ಪೂರ್ವಭಾವಿ ಸಭೆಯು ವಿಟ್ಲ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವಾ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶ್ರೀ ಅರುಣ್ ವಿಟ್ಲ ಕಾರ್ಯದರ್ಶಿ ಶ್ರೀ ಕರುಣಾಕರ ನಾಯ್ತೋಟು ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶ್ರೀ ವೀರಪ್ಪ ಗೌಡ ರಾಯರಬೆಟ್ಟು ಲೋಕನಾಥ್ ಶೆಟ್ಟಿ ಕೊಲ್ಯ, ಹರೀಶ್ ವಿಟ್ಲ, ಪಕ್ಷದ ಪ್ರಮುಖರಾದ ಮೋಹನ್ ದಾಸ್ ಉಕ್ಕುಡ, ರಾಮ್ ದಾಸ್ ವಿಟ್ಲ, ನರ್ಸಪ್ಪ ಪೂಜಾರಿ ನಿಡ್ಯ, ಜಗದೀಶ್ ಪನೆಮಾಜಲು ಹಾಗೂ ಪಕ್ಷದ ಮುಖಂಡರು, ಮಾಜಿ ಪ.ಪಂ ಸದಸ್ಯರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!