Friday, April 26, 2024
spot_imgspot_img
spot_imgspot_img

ವಿಟ್ಲ: ಬೀಡಿನಮಜಲು ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಹವನ ಪುರಸ್ಸರ ಸಗ್ರಹ ಶನೈಶ್ಚರ ಶಾಂತಿ ಸಹಿತ ಮೇಧಾ ದಕ್ಷಿಣಾಮೂರ್ತಿ ಹವನ

- Advertisement -G L Acharya panikkar
- Advertisement -

ವಿಟ್ಲ: ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನ ಬೀಡಿನಮಜಲು ಮಿತ್ತೂರು ಇಡ್ಕಿದು ಇಲ್ಲಿ ದಿನಾಂಕ 27-02-2022ನೇ ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ ಹವನ ಪುರಸ್ಸರ ಸಗ್ರಹ ಶನೈಶ್ಚರ ಶಾಂತಿ ಸಹಿತ ಮೇಧಾ ದಕ್ಷಿಣಾಮೂರ್ತಿ ಹವನ ನಡೆಯಲಿದೆ. ಈ ಹೋಮಕ್ಕೆ ವಿಶೇಷ ಸವಿತ್ತುಗಳನ್ನು ಮತ್ತು ದೇಶೀಯ ಗೋವಿನ ಬೆರಣಿಯನ್ನು ಉಪಯೋಗ ಮಾಡುತ್ತಾರೆ. ಈ ಹೋಮ ನಮ್ಮ ಊರಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪೂರ್ವಾಹ್ನ ಗಂಟೆ 6.45ಕ್ಕೆ : ದೀಪ ಪ್ರಜ್ವಲನೆ, 7.00 ರಿಂದ : ದೇವತಾ ಪ್ರಾರ್ಥನೆ, ಮಹಾಸಂಕಲ್ಪ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, 7.30 ರಿಂದ : ನವಗ್ರಹ ಪೂಜೆ, ಶನೈಶ್ಚರ ಕಲ್ಲೋಕ್ತ ಪೂಜೆ, ಮೇದಾ ದಕ್ಷಿಣಾಮೂರ್ತಿ ಪೂಜೆ. 8.30 ರಿಂದ : ಸರ್ವಾರಿಷ್ಠ ಶಾಂತಿ ವೇದೋಕ್ತ ಜಪ. 9.30 ರಿಂದ : ಪ್ರಧಾನ ಹವನ ಪ್ರಾರಂಭವಾಗಿದೆ. 11.00 ರಿಂದ : ಶನೈಶ್ಚರ ಕಥಾ ಪ್ರವಚನ. ಮಧ್ಯಾಹ್ನ 12.00 : ಪೂರ್ಣಾಹುತಿ, ದೀಪಾರಾಧನೆ, ಪ್ರಸಾದ ಭೋಜನ ನಡೆಯಲಿದೆ.

ಶನಿಕಥಾ ಯಕ್ಷಗಾನಕ್ಕೆ ತನ್ನನ್ನು ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ತಮ್ಮ ಆಧ್ಯಾತ್ಮ ಜ್ಞಾನ ಪ್ರಭಾ ವಲಯವನ್ನೇ ನಿರ್ಮಿಸಿ ಕಣ್ಣಿಲ್ಲದಿದ್ದರೂ ಅಂತರಾಳದಲ್ಲಿ ದಿವ್ಯ ಜ್ಯೋತಿ ಬೆಳಗಿ ಸಮಾಜಕ್ಕೆ ಬೆಳಕಾಗಿರುವ ಶ್ರೀಯುತ ಕಿರಣ್ ಕುಮಾರ್ ಪಡುಪಣಂಬೂರು ಇವರಿಂದ ಕರ್ನಾಟಕ ಕರಾವಳಿಯ ವಿಶೇಷ ಕಲೆಯ ಪೂಜೆಯೂ ಆಗಿರುವ ಶನಿ ಕಥಾ ಪ್ರವಚನ ನಡೆಯಲಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಸಂದರ್ಭದಲ್ಲಿ ರಾಜರಾಮ್ ಶೆಟ್ಟಿ ಕೊಲ್ಪೆ ಗುತ್ತು, ಆಡಳಿತ ಮೊಕ್ತೇಸರಾದ ಸುರೇಶ್ ಕೆ.ಎಸ್, ಪ್ರಪುಲ್ ಚಂದ್ರ ಪಿಜಿ ಕೊಲ್ಪೆ ಉಪಸ್ಥಿತರಿದ್ದರು.

ಸೇವಾ ವಿವರ: ಶನಿ ಶಾಂತಿ ಹೋಮ, ಮೇಧಾ ದಕ್ಷಿಣಾಮೂರ್ತಿ ಹೋಮ ರೂ. 350/ (ಸೇವಾರ್ಥಿಗಳು ಎಳ್ಳು, 2 ತೆಂಗಿನ ಕಾಯಿ ತರಬೇಕು) ತುಪ್ಪ, ಜೇನು, ಅಕ್ಕಿ, ತರಕಾರಿ, ಹೂವು ಸುವಸ್ತುಗಳನ್ನು ನೀಡಬೇಕಾಗಿ ತಿಳಿಸಿದ್ದಾರೆ. ದೇವಸ್ಥಾನದಲ್ಲಿ ವೈಯುಕ್ತಿಕ ಪೂಜೆ, ಹವನ, ಶಾಂತಿ ಹೋಮಗಳನ್ನು ನಡೆಸಲು ಅವಕಾಶ ಇದೆ (ಸಂಪರ್ಕಿಸಿ: 9892856469 ಪ್ರಧಾನ ಅರ್ಚಕರು).

- Advertisement -

Related news

error: Content is protected !!