Thursday, March 28, 2024
spot_imgspot_img
spot_imgspot_img

ವಿಟ್ಲ: ಶ್ರೀ.ಕ್ಷೇ.ಧ.ಗ್ರಾ.ಯೋ ಇದರ ಕಲ್ಲಡ್ಕ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಮಾಮೇಶ್ವರ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ

- Advertisement -G L Acharya panikkar
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಮಾಮೇಶ್ವರ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತಿಮೊಗರು ಇಲ್ಲಿ ಕಲ್ಲಡ್ಕ ವಲಯ ಅಧ್ಯಕ್ಷ ರಾದ ಶ್ರೀಯುತ ಈಶ್ವರ ನಾಯ್ಕ ಮುರಬೈಲು ಇವರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ ಬಲ್ಲಾಳ್ ದೀಪ ಬೆಳಗಿಸಿ ಕಲ್ಪವೃಕ್ಷದ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯಾವುದೇ ಒಂದು ಕಾರ್ಯಕ್ರಮದ ಪೂರ್ಣ ಯಶಸ್ವಿಗೆ ಹೇಗೆ ಸಹಕಾರಿ ಆಗುತ್ತಾರೆ ಎಂಬುದನ್ನು ಸೀಮೆಯ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ತಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೆ ಪ್ರತ್ಯಕ್ಷ ಸಾಕ್ಷಿ ಎಂದರು.

vtv vitla
vtv vitla

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಯೋಜನಾಧಿಕಾರಿ ಶ್ರೀ ಚೆನ್ನಪ್ಪ ಗೌಡ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಯೋಜನೆಯ ವಲಯವನ್ನು ಒಕ್ಕೂಟ ಗಳಾಗಿ ವಿಂಗಡಿಸಲು ಕಾರಣ, ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿಗಳು, ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ದಿಕ್ಸೂಚಿ ಭಾಷಣ ಮಾಡಿದ ಬಂಟ್ವಾಳ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ದಿನೇಶ್ ಮಾಮೇಶ್ವರ ಪ್ರತಿದಿನ ಭಜನಾ ಸಂಕೀರ್ತನೆ ಮಾಡುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ ಮಾಮೇಶ್ವರ ಒಕ್ಕೂಟವು ಒಟ್ಟು 44 ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟವಾಗಿದ್ದು 330 ಸದಸ್ಯರನ್ನು ಒಳಗೊಂಡಿದ್ದು ಸುಮಾರು 60 ಲಕ್ಷ 20 ಸಾವಿರ ಉಳಿತಾಯ ಮಾಡಿ 2 ಕೋಟಿ 32 ಲಕ್ಷ ಸಾಲದ ವ್ಯವಹಾರ ನಡೆಸುತ್ತಿದೆ ಎಂದರು.


vtv vitla

ಈ ಸಂದರ್ಭದಲ್ಲಿ ಶ್ರೀಯುತ ಶಶಿಧರ್ ಗೌಡ ಕೈಂತಿಲ ಇವರು ಕೊಡಲ್ಪಟ್ಟ 50 ಕೆಜಿ ಅಕ್ಕಿ ಯನ್ನು ಶ್ರೀಮತಿ ಜಾನಕಿ ಬೊಳಂತಿಮೊಗರು ಇವರಿಗೆ ನೀಡಲಾಯಿತು. ಪದಗ್ರಹಣ ನಿಮಿತ್ತ ಸದಸ್ಯರಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ಒಕ್ಕೂಟದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಎಸ್ ಪಿ, ಪದಾಧಿಕಾರಿಗಳಾದ ಸವಿತಾ, ನಿತಿನ್ ಕುಮಾರ್, ವೀಣಾ, ಮಕ್ಬುಲ್ ಖಾನ್, ನೂತನ ಅಧ್ಯಕ್ಷರಾದ ಹರೀಶ್ ವಿ ಮಾಡ, ಪದಾಧಿಕಾರಿಗಳಾದ ರಾಮಣ್ಣ, ಸುಮಲತಾ ,ಲೀಲಾವತಿ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ಮಾಮೇಶ್ವರ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಯಶೋಧ ಒಕ್ಕೂಟದ ವರದಿಯನ್ನು ವಾಚಿಸಿದರು .ಪುರಂದರ ಪ್ರಾರ್ಥಿಸಿ, ರಾಮಣ್ಣ ಸಪಲ್ಯ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ಸುಮಲತಾ ಧನ್ಯವಾದ ವಿತ್ತರು. ಹರೀಶ್ ವಿ ಮಾಡ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!