Thursday, May 2, 2024
spot_imgspot_img
spot_imgspot_img

ಸುಳ್ಯ: ಸ್ಕೂಟಿ ಕದ್ದು ಹೊಟೇಲ್‌ ಶೌಚಾಲಯದಲ್ಲಿ ಮಲಗಿದ ಕಳ್ಳ ಪೊಲೀಸರ ಅತಿಥಿಯಾದ ..!!

- Advertisement -G L Acharya panikkar
- Advertisement -

ಸುಳ್ಯ : ಸ್ಕೂಟಿಯನ್ನು ಕದ್ದ ಬಂದ ಕಳ್ಳನೊಬ್ಬ ಹೊಟೇಲ್‌ ಶೌಚಾಲಯದಲ್ಲಿ ಮಲಗಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯ ದಲ್ಲಿ ನಡೆದಿದೆ.

ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸ್ಕೂಟಿ ಕದ್ದು ಬಂದು ಮಂಡ್ಯದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಸುಳ್ಯ ಸಮೀಪದ ಗೂನಡ್ಕದ ದೊಡ್ಡಡ್ಕದಲ್ಲಿರುವ ಹೋಟೆಲ್‌ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ. ಟೀ ಕುಡಿದ ಬಳಿಕ ಈತ ಶೌಚಾಲಯಕ್ಕೆಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಹೊರಬಾರದಿದ್ದಾಗ ಹೋಟೆಲ್‌ನಲ್ಲಿ ಇದ್ದವರು ಶೌಚಾಲಯದ ಬಾಗಿಲು ಬಡಿದಿದ್ದಾರೆ.

ಆದರೆ ಒಳಗಿನಿಂದ ಯಾವುದೇ ಶಬ್ದ ಬಾರದಿದ್ದಾಗ ಶೌಚಾಲಯದ ಬಾಗಿಲಿನ ಮೇಲ್ಭಾಗದ ರಂಧ್ರದಿಂದ ಇಣುಕಿ ನೋಡಿದ್ದು ಆತ ಕೆಳಗೆ ಬಿದ್ದ ರೀತಿ ಪತ್ತೆಯಾಗಿದ್ದಾನೆ. ಗಾಬರಿಗೊಂಡ ಹೋಟೆಲ್‌ನವರು ಆತನ ಮೇಲೆ ನೀರು ಹಾಕಿದ್ದಾರೆ. ತಕ್ಷಣ ನಿದ್ದೆಯಿಂದೆದ್ದ ಆತ ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ. ಹೋಟೆಲ್‌ನವರು ಆತನನ್ನು ವಿಚಾರಿಸಿದಾಗ ಸಂಶಯಾಸ್ಪದವಾಗಿ ಮಾತನಾಡಿದ್ದು ಅಲ್ಲಿಂದ ಸ್ಕೂಟಿಯಲ್ಲಿ ಮಡಿಕೇರಿ ಕಡೆ ತೆರಳಲು ಪ್ರಯತ್ನಿಸಿದ್ದಾನೆ. ಸಂಶಯಗೊಂಡ ಹೋಟೆಲ್‌ನವರು ಕಲ್ಲುಗುಂಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕೋಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಲ್ಲಿನ ಪೋಲಿಸರು ಸ್ಕೂಟಿ ವಾಹನವೊಂದು ಕಳ್ಳತನವಾಗಿರುವ ದೂರು ದಾಖಲಾಗಿರುವ ಮಾಹಿತಿ ನೀಡಿದ್ದಾರೆ. ಕೋಟಾ ಪೊಲೀಸರು ಸುಳ್ಯಕ್ಕೆ ಆಗಮಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ
.

- Advertisement -

Related news

error: Content is protected !!