Sunday, May 19, 2024
spot_imgspot_img
spot_imgspot_img

ಸುಳ್ಯ: ಹತ್ತುದಿನದ ಹಸುಗೂಸನ್ನು ಬಾವಿಗೆಸೆದು ಕೊಂದ ತಾಯಿ

- Advertisement -G L Acharya panikkar
- Advertisement -

ಸುಳ್ಯ: ಹತ್ತುದಿನದ ಹಸುಗೂಸನ್ನು ತಾಯಿಯೊಬ್ಬಳು ಬಾವಿಗೆಸೆದು ಕೊಂದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸ್ತಿ ಕಾಡು ಎಂಬಲ್ಲಿ ಇಂದು(ಅ.29) ಸಂಜೆ ತಾಯಿ ಹತ್ತು ದಿನದ ಮಗುವನ್ನು ಬಾವಿಗೆ ಎಸೆದಿದ್ದು, ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಮಗುವನ್ನು ಬಾವಿಗೆ ಎಸೆದ ತಾಯಿ ಪವಿತ್ರ ಎಂದು ಗುರುತಿಸಲಾಗಿದೆ.

ಪವಿತ್ರ ಅವರು ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದು, ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯುಲಾಗಿದೆ.

- Advertisement -

Related news

error: Content is protected !!