Thursday, September 10, 2026
spot_imgspot_img
spot_imgspot_img

ಸೂರಿಕುಮೇರು ಎಸ್‌ವೈ‌ಎಸ್ ನಿಂದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ; ದ್ಸಿಕ್ರ್ ಮಜ್ಲಿಸ್ ಗಳು ಧಾರ್ಮಿಕ ಹುಮ್ಮಸ್ಸು ಇಮ್ಮಡಿ ಗೊಳಿಸುತ್ತದೆ : ಇಬ್ರಾಹಿಂ ಸಅದಿ ಮಾಣಿ

- Advertisement -
- Advertisement -

ಮಾಣಿ : ಆಧ್ಯಾತ್ಮಿಕ ಚಟುವಟಿಕೆಗಳು ದ್ಸಿಕ್ರ್ ಸ್ವಲಾತ್ ಮಜ್ಲಿಸ್‌ಗಳು ಸತ್ಯ ವಿಶ್ವಾಸಿಯ ಧಾರ್ಮಿಕ ಹುಮ್ಮಸ್ಸು ಇಮ್ಮಡಿಗೊಳಿಸುತ್ತವೆ,ಮತ್ತು ದೀನ್ ಜೀವಂತಗೊಳಿಸಲು ನೆರವಾಗುತ್ತದೆ ಎಂದು ಸುನ್ನೀ ಜಂ‌ಇಯ್ಯತುಲ್ ಉಲಮಾ ಪುತ್ತೂರು ಅಧ್ಯಕ್ಷರಾದ ಬಹು, ಇಬ್ರಾಹಿಂ ಸಅದಿ ಮಾಣಿ ಹೇಳಿದರು.

ಅವರು ಎಸ್‌ವೈ‌ಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಬ್ರಾಂಚ್ ವತಿಯಿಂದ ಕೆಸಿಎಫ್ ಕಾರ್ಯಕರ್ತ ಹಾರಿಸ್ ಸೂರಿಕುಮೇರು ರವರ ನಿವಾಸದಲ್ಲಿ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ನಲ್ಲಿ ಮುಖ್ಯ ಭಾಷಣ ಮಾಡಿದರು,ಅಶ್ರಫ್ ಸಖಾಫಿ ಸೂರಿಕುಮೇರು ಮಜ್ಲಿಸ್‌ಗೆ ನೇತೃತ್ವ ನೀಡಿದರು,ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಶಿಲ್ಪಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಮಂಜನಾಡಿ ಪ್ರಾಸ್ತಾವಿಕ ಅನಿಸಿಕೆ ವ್ಯಕ್ತಪಡಿಸಿದರು, ಬ್ರಾಂಚ್ ಉಸ್ತುವಾರಿ ಹೈದರ್ ಸಖಾಫಿ ಗಡಿಯಾರ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್, ಸೆಂಟರ್ ಕಾರ್ಯದರ್ಶಿ ಸ್ವಾದಿಕ್ ಪೇರಮೊಗರು,ಕೋಶಾಧಿಕಾರಿ ದಾವೂದ್ ಕಲ್ಲಡ್ಕ,ನಾಯಕರಾದ ಹನೀಫ್ ಸಂಕ,ಹಬೀಬ್ ಶೇರಾ,ಸುಲೈಮಾನ್ ಸೂರಿಕುಮೇರು,ಫಾರೂಕ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು,ಇಮ್ರಾನ್ ಸೂರಿಕುಮೇರು,ಹಂಝ ಸೂರಿಕುಮೇರು, ಮುಂತಾದವರು ಉಪಸ್ಥಿತರಿದ್ದರು, ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದಗೈದರು.

- Advertisement -

Related news

error: Content is protected !!