Friday, April 26, 2024
spot_imgspot_img
spot_imgspot_img

ಸೌತ್​ ಆಫ್ರಿಕಾ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​ಶಿಪ್​​ಗೆ ಕೊಹ್ಲಿ ಗುಡ್ ​​ಬೈ

- Advertisement -G L Acharya panikkar
- Advertisement -
vtv vitla
vtv vitla

ನಿನ್ನೆ ಅಂತ್ಯವಾಗಿದ್ದ ನ್ಯೂಜಿಲೆಂಡ್​ ವಿರುದ್ಧ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿತ್ತು. ದಕ್ಷಿಣ ಆಫ್ರಿಕಾ ತಂಡ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು. ಈ ನಡುವೆ ಮಹತ್ವದ ನಿರ್ಧಾರ ಪ್ರಕಟಿಸಿರೋ ವಿರಾಟ್​ ಕೊಹ್ಲಿ, ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ನ್ಯೂಜಿಲೆಂಡ್​ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ, ಇಂಗ್ಲೆಂಡ್​​ನಲ್ಲಿ ಅದ್ಭುತ ಪ್ರದಶನ ತೋರಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾ ತಂಡ ಹಿರಿಯ ಆಟಗಾರರ ಗೈರಿನಲ್ಲಿ ವೀಕ್​​ ಆಗಿ ಕಂಡು ಬಂದಿತ್ತು. ಹಲವು ಕ್ರಿಕೆಟ್​ ವಿಶ್ಲೇಷಕರು ಟೀಂ ಇಂಡಿಯಾ, ಸೌತ್ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಪಡೆಯಲು ಇದು ಮಹತ್ವದ ಅವಕಾಶ ಎಂದೇ ವಿಶ್ಲೇಷಣೆ ಮಾಡಿದ್ದರು. ಆದರೆ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ಟೀಂ ಇಂಡಿಯಾ ಆ ಬಳಿಕ ಎರಡೂ ಪಂದ್ಯದಲ್ಲೂ ಸೋಲುಂಡು ನಿರಾಸೆ ಅನುಭವಿಸಿತ್ತು. ಇದರೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲೂ ಕೊಹ್ಲಿ ನಾಯಕತ್ವ ಬಗ್ಗೆ ವಿಮರ್ಶೆಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೇ ನಾಯಕತ್ವದಿಂದ ಕೆಳಗಿಳಿಯೋದಾಗಿ ಘೋಷಣೆ ಮಾಡಿರುವ ಕೊಹ್ಲಿ, ಅಭಿಮಾನಿಗಳಿಗೆ ಬಿಗ್​ ಶಾಕ್​ ನೀಡಿದ್ದಾರೆ.

vtv vitla

ಇದೇ ಸಂದರ್ಭದಲ್ಲಿ ತಮ್ಮ 7 ವರ್ಷದ ನಾಯಕತ್ವದ ಪ್ರಯಾಣದಲ್ಲಿ ಸಹಕಾರ ನೀಡಿದ ಬಿಸಿಸಿಐ ಹಾಗೂ ತಂಡ ಸಹ ಆಟಗಾರರಿಗೆ ಕೊಹ್ಲಿ ಧನ್ಯವಾದ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಸೋಲಿನ ಬೆನ್ನಲ್ಲೇ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಏಕದಿನ ಹಾಗೂ ಟಿ-20 ಮಾದರಿಯ ನಾಯಕತ್ವದಿಂದ ಕೆಳಗಿಳಿದ ವಿಚಾರದಲ್ಲಿ ಕೊಹ್ಲಿ, ಬಿಸಿಸಿಐ ಬಾಸ್​​ಗಳೊಂದಿಗೆ ಮನಸ್ತಾಪ ಕೂಡ ಏರ್ಪಟ್ಟಿತ್ತು.

suvarna gold
- Advertisement -

Related news

error: Content is protected !!